ಪವರ್ ಸ್ಟಾರ್ 'ಕಿಂಗ್ ಆಫ್ ಸ್ಯಾಂಡಲ್ ವುಡ್' ಎಂದು ಹೇಳಿದ್ದು ಯಾರು ಗೊತ್ತಾ?

ಸಂಪರ್ಕ್ ಫಾರ್ ಸಮರ್ಥನ್ ಅಭಿಯಾನದ ವಿಚಾರವಾಗಿ ಸಂಸದೆ ಶೋಭಾ ಕರಂದ್ಲಾಜೆ ಅವರು ಪವರ್ ಸ್ಟಾರ್ ಅವರನ್ನು ಭೇಟಿ ಮಾಡಿ ಮೋದಿ ಸರ್ಕಾರದ ಸಾಧನೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಮೋದಿ ಸರ್ಕಾರದಲ್ಲಿ ಏನೇನು ಅಭಿವೃದ್ಧಿಯಾಗಿದೆ, ಎಷ್ಟರ ಮಟ್ಟಿಗೆ ಅಭಿವೃದ್ಧಿಯಾಗಿದೆ ಎಂಬ ಸಾಧನೆಯ ಪುಸ್ತಕವನ್ನು ಅವರಿಗೆ ನೀಡಿದ್ದಾರೆ.
ಪುನೀತ್ ರಾಜಕುಮಾರ್ ಭೇಟಿಯ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, 'ಅಪ್ಪನಂತೆ ಮಗ.' 'ಸಂಪರ್ಕ್ ಫಾರ್ ಸಮರ್ಥನ್' ವಿಷಯಕ್ಕಾಗಿ ಇಂದು 'ಕಿಂಗ್ ಆಫ್ ಸ್ಯಾಂಡಲ್ ವುಡ್ 'ಹಾಗೂ ಒಬ್ಬ ಒಳ್ಳೆಯ ವ್ಯಕ್ತಿ ಪುನೀತ್ ರಾಜ್ ಕುಮಾರ್ ಎಂದು ಬರೆದುಕೊಂಡಿದರೆ.
Comments