ರಕ್ಷಣಾ ಜಾಕೆಟ್ ತಯಾರು ಮಾಡಿಕೊಳ್ಳುವುದು ಹೇಗೆ ಗೊತ್ತಾ..? ಐಪಿಎಸ್ ಅಧಿಕಾರಿ ಡಿ. ರೂಪಾ ಅವರ ಟ್ವಿಟರ್’ನಲ್ಲಿದೆ ವಿಡಿಯೋ..ನೀವೊಮ್ಮೆ ನೋಡಿ

ಸ್ವಲ್ಪ ದಿನಗಳ ಹಿಂದೆ ರಾಜ್ಯದ ಎಲ್ಲಾ ಕಡೆಗಳಲ್ಲೂ ಪ್ರವಾಹದ್ದೇ ಮಾತಾಗಿತ್ತು. ಎಲ್ಲಾ ಕಡೆಗಳಲ್ಲಿ ವರುಣನ ಆರ್ಭಟ ಹೆಚ್ಚಾಗುತ್ತಿದೆ. ನದಿ, ಕೆರೆ ಕಟ್ಟೆಗಳಲ್ಲಿ ನೀರು ರೌದ್ರ ನರ್ತನ ಪ್ರಾರಂಭವಾಗಿದೆ. ಶಾಂತ ಚಿತ್ತವಾಗಿ ಹರಿಯುತ್ತಿದ್ದ ನದಿಗಳು ಈಗ ಉಗ್ರ ರೂಪ ತಾಳಿದೆ. ಪ್ರಕೃತಿ ಮುನಿದುಕೊಂಡು ಬಿಟ್ಟಿದೆ.
ಹಾಗಾಗಿಯೇ ಎಲ್ಲಾ ಕಡೆಗಳಲ್ಲೂ ಪ್ರವಾಹ ಸಂಭವಿಸಿ ಮನೆಗಳಿಗೆ ನೀರು ನುಗ್ಗಿದೆ. ಜನರು ವಾಸ ಮಾಡಲು ಸಾಧ್ಯವೇ ಇಲ್ಲ ಎಂಬ ಸ್ಥಿತಿಯು ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮನ್ನು ನಾವು ಕಾಪಾಡಿಕೊಳ್ಳುವುದನ್ನು ಅರಿತಿರುವುದು ಅತ್ಯಂತ ಅಗತ್ಯವಾಗಿದೆ. ರಕ್ಷಣಾ ಕಾರ್ಯ ಪಡೆ ಅಥವಾ ಮತ್ಯಾರೋ ಬಂದು ನಮ್ಮನ್ನು ರಕ್ಷಣೆ ಮಾಡಲಿ ಎಂದು ಕಾಯುತ್ತಾ ಕುಳಿತಿರುವಷ್ಟು ಸಮಯ ಪ್ರವಾಹ ಬಂದಾಗ ಇರುವುದಿಲ್ಲ. ಈಜು ಬರದೇ ಇದ್ದರೂ ಕನಿಷ್ಠ ಪಕ್ಷ ಪ್ರಾಣವನ್ನಾದರೂ ಉಳಿಸಿಕೊಳ್ಳಬಹುದಾಗಿದೆ. ಅಂತಹ ರಕ್ಷಣಾ ಜಾಕೆಟ್ ಅನ್ನು ಅತ್ಯಂತ ಸುಲಭವಾಗಿ ನಾವೇ ತಯಾರಿಸಿಕೊಳ್ಳಬಹುದು. ಆ ಮೂಲಕ ನೀರಿನ ಮಟ್ಟ ಹೆಚ್ಚಾದಾಗಲೂ ನಾವು ಮುಳುಗುವುದಿಲ್ಲ. ಕಡೇ ಪಕ್ಷ ಪ್ರಾಣವನ್ನು ಉಳಿಸಿಕೊಳ್ಳಲು ನೆರವಾಗುತ್ತದೆ. ಈಜು ಬರದೇ ಇದ್ದರೂ ನೀರಿನಲ್ಲಿ ತೇಲುತ್ತಾ ಯಾವುದಾದರೂ ದಡ ಸೇರಬಹುದಾಗಿದೆ. ಆ ಮೂಲಕ ನಮ್ಮ ಪ್ರಾಣವನ್ನಾದರೂ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಸ್ವಯಂ ರಕ್ಷನೆ ಮಾಡಿಕೊಳ್ಳುವ ರಕ್ಷಣಾ ಜಾಕೆಟ್ ಯನ್ನು ತಯಾರು ಮಾಡಿಕೊಳ್ಳುವ ವಿಧಾನವನ್ನು ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ತಮ್ಮ ಟ್ವಿಟರ್ ನಲ್ಲಿ ವೀಡಿಯೋವನ್ನು ಶೇರ್ ಮಾಡಿದ್ದಾರೆ. ನೀವೂ ನೋಡಿ ಈ ರಕ್ಷಣಾ ಜಾಕೆಟ್ ತಯಾರಿ ಮಾಡಿಕೊಳ್ಳುವ ವೀಡಿಯೋವನ್ನು.
A simple hack to make a life jacket-- pic.twitter.com/HnLHJ2Su2i
Comments