ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ ರೈಲ್ವೆ ಇಲಾಖೆ
ಸಾಕಷ್ಟು ನೂತನ ಯೋಜನೆಗಳನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಜಾರಿಗೆ ತಂದಿರುವ ಭಾರತೀಯ ರೈಲ್ವೆ ಇಲಾಖೆ ಇತ್ತೀಚಿಗಷ್ಟೇ 300 ರೈಲುಗಳ ಸಮಯದಲ್ಲಿ ಬದಲಾವಣೆ ಮಾಡಿದೆ ಎಂದು ತಿಳಿಸಿದ್ದಾರೆ.
ರೈಲಿನ ಸಮಯವನ್ನು 5 ನಿಮಿಷದಿಂದ ಎರಡೂವರೆ ಗಂಟೆಯವರೆಗೆ ಕೂಡ ಬದಲಾವಣೆ ಮಾಡಲಾಗಿದೆ ಮಾಡಿದ್ದಾರೆ. ಅಷ್ಟೆ ಅಲ್ಲದೆ ಇದರ ಜೊತೆಗೆ ಹೊಸ ರೈಲುಗಳನ್ನು ಕೂಡ ಘೋಷಣೆ ಮಾಡಿದೆ.ಹೊಸ ರೈಲುಗಳನ್ನು ರೈಲ್ವೆ ಇಲಾಖೆಯು ತನ್ನ ವೇಳಾಪಟ್ಟಿಯಲ್ಲಿ ಸೇರಿಸಿದೆ. ಮುಂದಿನ ವರ್ಷದಲ್ಲಿ ಅಂತ್ಯೋದಯ ಎಕ್ಸ್ ಪ್ರೆಸ್, ಉದಯ ಎಕ್ಸ್ಪ್ರೆಸ್ ಮತ್ತು ತೇಜ್ ಎಕ್ಸ್ ಪ್ರೆಸ್ ಬಿಡುವ ಸಿದ್ಧತೆಯನ್ನು ನಡೆಸಿದೆ. ಎರಡು ತೇಜಸ್, ಎರಡು ಅಂತ್ಯೋದಯ ಹಾಗೂ ಎರಡು ಉದಯ ಎಕ್ಸ್ ಪ್ರೆಸ್ ರೈಲನ್ನು ಸಮಯಕ್ಕಿಂತ ಮೊದಲು ಪ್ರಾರಂಭಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
Comments