ನೆರೆ ಪೀಡಿತ ಕೊಡಗು ಜಿಲ್ಲೆಗೆ ಇಂದು ಸಿಎಂ ಕುಮಾರಸ್ವಾಮಿ ಭೇಟಿ..!

ಅತೀವೃಷ್ಟಿಯಿಂದಾಗಿ ಕೊಡಗು, ಕರಾವಳಿ ಭಾಗದ ಜನರು ಈಗಾಗಲೇ ತತ್ತರಿಸಿ ಹೋಗಿದ್ದಾರೆ. ಈಗಾಗಲೇ ಮಳೆಯಿಂದಾಗಿ ಕೊಡಗಿನಲ್ಲಿ ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಹಾಗಾಗಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಕೊಡಗು ಜಿಲ್ಲೆಗೆ ಭೇಟಿ ನೀಡಿ, ಪರಿಹಾರದ ಕುರಿತು ಪರಿಶೀಲನೆ ನಡೆಸಲು ನಿರ್ಧಾರ ಮಾಡಿದ್ದಾರೆ.
ಭಾರಿ ಮಳೆಯಿಂದಾಗಿ ಗುಡ್ಡ ಕುಸಿತದಿಂದ ಇಲ್ಲಿನ ಪರಿಸ್ಥಿತಿ ಹೆಚ್ಚು ಹದಗೆಟ್ಟಿದೆ, ರಸ್ತೆಗಳು ಸಂಪೂರ್ಣವಾಗಿ ಕೊಚ್ಚಿ ಹೋಗಿವೆ. ಕೊಡಗು ಜಿಲ್ಲೆಯ ಎಷ್ಟು ಪ್ರದೇಶಗಳಿಗೆ ಸಂಪರ್ಕವೇ ಇಲ್ಲದಾಗಿದೆ. ಎರಡೂ ಮೂರು ದಿನಗಳಿಂದ ವಿದ್ಯುತ್ ಸಂಪರ್ಕವೂ ಕೂಡ ಕಡಿತಗೊಂಡಿದೆ. ಸಿಎಂ ಹೆಚ್.ಡಿ. ಕುಮಾರಸ್ವಾಮಿ ಗೃಹ ಕಚೇರಿ ಕೃಷ್ಣಾದಲ್ಲಿ ಬೆಳಗ್ಗೆ 10.30 ಗಂಟೆಗೆ ಉನ್ನತ ಮಟ್ಟದ ಸಭೆ ನಡೆಸಲಿದ್ದು,ನಂತರ ಕೊಡಗು ಜಿಲ್ಲೆಗೆ ಹೋಗಲಿದ್ದಾರೆ
Comments