ದೇಶ ಕಂಡ ಅತ್ಯದ್ಭುತ ರಾಜಕಾರಣಿ ವಾಜುಪೇಯಿ ಇನ್ನಿಲ್ಲ
ಅಟಲ್ ಬಿಹಾರಿ ವಾಜುಪೇಯಿ.. ದೇಶ ಕಂಡ ಅತ್ಯದ್ಭುತ ರಾಜಕಾರಣಿ.. ಇವರು ಕಳೆದ ಎರಡು ತಿಂಗಳಿನಿಂದಲೂ ಕೂಡ ವಯೋ ಸಹಜ ಅನಾರೋಗ್ಯದಿಂದ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತಹ ಮಾಜಿ ಪ್ರಧಾನಿಯಾದ ಅಟಲ್ ಬಿಹಾರಿ ವಾಜಪೇಯಿ ಚಿಕಿತ್ಸೆ ಫಲಕಾರಿಯಾಗದೇ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇಂದು ಸುಮಾರು ಸಂಜೆ 5.05 ನಿಮಿಷಕ್ಕೆ ವಿಧಿವಶರಾಗಿದ್ದಾರೆ.
ಮಧ್ಯಪ್ರದೇಶದ ಬ್ರಾಹ್ಮಣ ಕುಟುಂಬದಲ್ಲಿ ಕೃಷ್ಣ ಬಿಹಾರಿ ವಾಜಪೇಯಿ ಮತ್ತು ಕೃಷ್ಣ ದೇವಿ ದಂಪತಿಗಳ ಮಗನಾಗಿ ಡಿಸೆಂಬರ್ 25, 1924 ರಂದು ಗ್ವಾಲಿಯರ್ನಲ್ಲಿ ಜನಿಸಿದ್ದರು... ಮದುವೆಯಾಗದೆ ಬ್ರಹ್ಮಚಾರಿಯಾಗಿದ್ದ ವಾಜಪೇಯಿ ಉತ್ತಮ ವಾಗ್ಮಿ ಹಾಗೂ ಕವಿ ಕೂಡ ಆಗಿದ್ದರು. ಭಾರತ ಸರ್ಕಾರ ಇವರಿಗೆ 1992ರಲ್ಲಿ ಪದ್ಮ ವಿಭೂಷಣ ಮತ್ತು ಮಾರ್ಚ್ 27,2015 ರಂದು ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು. ಇವರ ಸಾವಿಗೆ ಅನೇಕ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ.
Comments