ಆಧಾರ್ ಕಾರ್ಡ್ ಇರುವ ಪ್ರತಿಯೊಬ್ಬರೂ ಇದನ್ನ ಓದಲೇಬೇಕು..!
ಈಗಾಗಲೇ ನಿಮ್ಮ ನಿಮ್ಮ ಬ್ಯಾಂಕ್ ಅಕೌಂಟ್ ಗೆ ನಿಮ್ಮ ಆಧಾರ್ ಕಾರ್ಡ್ಗಳನ್ನು ಲಿಂಕ್ ಮಾಡಿರುತ್ತೀರಿ, ಇದೀಗ ನಿಮ್ಮ ಆಧಾರ್ ನಿಂದಲೇ ಹಣ ದೋಚುತ್ತಾರಂತೆ ಖದೀಮರು.
ಕೆಲವು ದಿನಗಳ ಹಿಂದಷ್ಟೆ ಬಂದ ಮಾಹಿತಿಯ ಪ್ರಕಾರ ಹ್ಯಾಕರ್ ಗಳು ಆಧಾರ್ ಆಫೀಸರ್ ಹೆಸರಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ GST ಯ ಹೊಸ ನಂಬರ್ ಕೊಟ್ಟಿದ್ದಾರೆ ಅದು ನಿಮ್ಮ ಅಕೌಂಟ್‍ಗೆ ಸೇರಿಸಬೇಕು ಎಂದು ಮಾಹಿತಿ ಕೇಳುತ್ತಾರೆ. ನೀವು ಮಾಹಿತಿ ಹೇಳಿದ ತಕ್ಷಣವೇ ಫೋನ್ ಕಟ್ಟಾಗುತ್ತದೆ, ಕೆಲವು ನಿಮಿಷಗಳ ನಂತರ ನಿಮ್ಮ ಖಾತೆ ಅಲ್ಲಿರುವ ಹಣ ತಗೆದ ಮೆಸೇಜ್ ನಿಮ್ಮ ಮೊಬೈಲ್ ಗೆ ಬರುತ್ತದೆ, ನೀವು ಮಾಹಿತಿ ಕೊಟ್ಟ ಕೆಲವೇ ನಿಮಿಷಗಳಲ್ಲೇ ಖದೀಮರು ನಿಮ್ಮ ಹಣವನ್ನು ಕಸಿದುಕೊಂಡಿರುತ್ತಾರೆ. ಹಾಗಾಗಿ ಯಾರಾದರೂ ಕರೆ ಮಾಡಿ ಆಧಾರ್ ಅಥವಾ ಮತ್ತಿತ್ತರ ಮಾಹಿತಿಯನ್ನು ಕೇಳಿದರೆ ಕೊಡಬೇಡಿ.
Comments