ATM ನಲ್ಲಿ ಹಣ ಡ್ರಾ ಮಾಡಿದಾಗ ನಕಲಿ ನೋಟು ಬಂತಾ..! ಏನ್ ಮಾಡಬೇಕು..? ಇದನ್ನೊಮ್ಮೆ ಓದಿ

ಯಾವಾಗಲೂ ಜೇಬಿನಲ್ಲಿ ಹಣ ತುಂಬಿಕೊಂಡು ಹೋಡಾಡುವುದನ್ನು ಬಿಟ್ಟು ಜನ ಡೆಬಿಟ್ ಕ್ರೆಡಿಟ್ ಕಾರ್ಡ್ಗಳನ್ನಿಟ್ಟುಕೊಂಡು ಓಡಾಡುತ್ತಿದ್ದಾರೆ.
ATMಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಇಷ್ಟೆಲ್ಲ ಕ್ರಾಂತಿಯಾದರೂ ಕೂಡ ಕೆಲವು ಸಮಸ್ಯೆಗಳು ಈಗಲೂ ಇವೆ… ನೆಟ್ ಬ್ಯಾಂಕಿಂಗ್ನಲ್ಲಿ ವ್ಯವಹಾರ ಮಾಡುವವರ ಖಾತೆಗಳನ್ನು ಹ್ಯಾಕ್ ಮಾಡುವುದು, ಎಟಿಎಂ ಗಳಲ್ಲಿ ನಕಲಿ ನೋಟು ತುಂಬಿಸುವುದು ಮತ್ತಿತರ ಸಮಸ್ಯೆಗಳು ಈಗಲೂ ಇವೆ ಆದರೆ ಈ ಸಮಸ್ತೆಗಳಿಗೆ ಪರಿಹಾರವೂ ಇದೆ. ನೀವು ಎಟಿಎಂ ನಲ್ಲಿ ಹಣ ಡ್ರಾ ಮಾಡಿದಾಗ ನಕಲಿ ನೋಟು ಬಂದರೆ ಏನು ಮಾಡುವುದು ಎಂದು ಎಷ್ಟೋ ಜನರಿಗೆ ಗೊತ್ತಿಲ್ಲ… ಅಪ್ಪಿ ತಪ್ಪಿ ನೀವು ಎಟಿಎಂ ನಲ್ಲಿ ಹಣ ಡ್ರಾ ಮಾಡಿದಾಗ ನಕಲಿ ನೋಟು ಬಂದರೆ ಕೂಡಲೇ ಈ ರೀತಿ ಮಾಡಿ ನಕಲಿ ನೋಟಿಗೆ ಬದಲಾಗಿ ಅಸಲಿ ನೋಟುಗಳನ್ನು ಪಡೆಯಿರಿ.
ಪ್ರತಿಯೊಂದು ಎಟಿಎಂ ಕೇಂದ್ರದಲ್ಲಿಯೂ ಕೂಡ ಈಗ ಸೆಕ್ಯುರಿಟಿ ಗಾರ್ಡ್ ಇರುವುದು ಕಡ್ಡಾಯ, ಹಾಗೆಯೇ ಆ ಎಟಿಎಂ ಕೇಂದ್ರದಲ್ಲಿ ಒಂದು ದೂರಿನ ರಿಜಿಸ್ಟರ್ ಅನ್ನು ಬ್ಯಾಂಕಿನವರು ಇಡುವುದು ಕೂಡ ಕಡ್ಡಾಯ, ನೀವು ಡ್ರಾ ಮಾಡಿದ ಹಣದಲ್ಲ ನಕಲಿ ನೋಟು, ಸರಿಯಾಗಿ ಪ್ರಿಂಟ್ ಆಗದ ನೋಟುಗಳೇನಾದರೂ ಬಂದಿದ್ದಲ್ಲಿ ಆ ಬಗ್ಗೆ ಎಟಿಎಂ ಕೇಂದ್ರದಲ್ಲಿರುವ ಸೆಕ್ಯುರಿಟಿ ಗಾರ್ಡ್ಗೆ ತೋರಿಸಿ, ಆ ಕೇಂದ್ರದಲ್ಲಿರುವ ರಿಜಿಸ್ಟರ್ ಬುಕ್ನಲ್ಲಿ ದೂರು ದಾಖಲಿಸಿ. ರಿಜಿಸ್ಟಾರ್ ಬುಕ್ನಲ್ಲಿ ನಿಮಗೆ ಸಿಕ್ಕಿರುವ ನಕಲಿ ನೋಟಿನ ಸಿರಿಯಲ್ ನಂಬರ್, ಎಟಿಎಂ ನಿಂದ ಬಂದ ರೆಸಿಪ್ಟ್ ಸ್ಲಿಫ್ನ ಟ್ರಾನ್ಸಾಕ್ಷನ್ ಐಡಿಗಳನ್ನು ಬರೆದು ಅಲ್ಲಿರುವ ಸೆಕ್ಯುರಿಟಿ ಗಾರ್ಡ್ ಹತ್ತಿರ ಸಹಿ ಮಾಡಿಸಿ.
ನೇರವಾಗಿ ಬ್ಯಾಂಕಿಗೆ ತೆರಳಿ ಇದರ ಬಗ್ಗೆ ಒಮದು ದೂರನ್ನು ಮ್ಯಾನೆಜರ್ಗೆ ಬರೆಯಬೇಕು ಆ ವೇಳೆ ಎಟಿಎಂ ನಲ್ಲಿ ಬಂದ ನಕಲಿ ನೊಟು ಮತ್ತು ಎಟಿಎಂ ರೆಸಿಪ್ಟ್ ಸ್ಲಿಪ್ ಅನ್ನು ಜೆರಾಕ್ಸ್ ಮಾಡಿಸಿ ಲಗತ್ತಿಸಿ ದೂರು ನೀಡಬೇಕು. ಹಾಗೆ ಮಾಡಿದ ಮೇಲೆ ಅದನ್ನು ಪರಿಶೀಲಿಸಿ ನಕಲಿ ನೋಟುಗಳನ್ನು ಹಿಂಪಡೆದು ಅಸಲಿ ನೋಟನ್ನು ನಿಮಗೆ ನೀಡುತ್ತಾರೆ. ಈ ರೀತಿ ದೂರು ಸ್ವೀಕರಿಸದೇ ಇದ್ದರೆ ನೀವು ನೇರವಾಗಿ ಸ್ಥಳಿಯವಾಗಿ ಪೊಲೀಸ್ ಠಾಣೆಗೆ ದೂರು ನೀಡುವ ಅಧಿಕಾರ ನಿಮಗೆ ಇರುತ್ತದೆ. www.rbi.org.in ವೆಬ್ ಸೈಟ್ ನಲ್ಲಿ ದೂರು ನೀಡಬಹುದು.
Comments