ಗಣೇಶ ಕೂರಿಸುವವರಿಗೆ ಗುಡ್ ನ್ಯೂಸ್ ನೀಡಿದ ಬಿಬಿಎಂಪಿ
ಗಣೇಶ ಹಬ್ಬ ಬಂತು ಅಂದ್ರೆ ಸಾಕು ಹುಡುಗರಿಗೆಲ್ಲಾ ಏನೋ ಒಂಥರಾ ಖುಷಿ. ತಮ್ಮ ತಮ್ಮ ಏರಿಯಾದಲ್ಲಿ ಗಣೇಶ ಕೂರಿಸಿ ಹಾಡು ಹೇಳುತ್ತಾ ಡ್ಯಾನ್ಸ್ ಮಾಡೋದೆ ಒಂಥರಾ ಚಂದ.. ಆದರೆ ಇದೀಗ ಈ ಖುಷಿಗೆ ಬ್ರೇಕ್ ಬಿದ್ದಂತ್ತೆ ಆಗಿತ್ತು. ಆದರೆ ಇದೀಗ ಬಿಬಿಎಂಪಿ ಗಣೇಶ ಕೂರಿಸುವವರಿಗೆ ಸಿಗಿ ಸುದ್ದಿ ಕೊಟ್ಟಿದೆ.
ನಗರದಲ್ಲಿ ಗಣೇಶ್ ಮೂರ್ತಿ ಕೂರಿಸಲು ಅನುಮತಿ ನೀಡಲು ನಿಗದಿ ಪಡಿಸಿದ್ದ ಶುಲ್ಕವನ್ನು ಬಿಬಿಎಂಪಿ ಇದೀಗ ರದ್ದುಪಡಿಸಿದೆ. ಬಿಬಿಎಂಪಿಯ ಈ ನಿರ್ಧಾರಕ್ಕೆ ಗಣೇಶ ಉತ್ಸವ ಸಮಿತಿಗಳು ಖುಷಿಯಾಗಿವೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಕೂರಿಸಿ ಹಬ್ಬ ಆಚರಿಸುವವರಿಗೆ ಯಾವುದೇ ತೆರಿಗೆಯಾಗಲಿ, ಶುಲ್ಕವಾಗಲಿ ವಿಧಿಸುತ್ತಿಲ್ಲ ಎಂದು ಬಿಬಿಎಂಪಿ ಮಹಾಪೌರರು ತಿಳಿಸಿದ್ದಾರೆ.
Comments