ನಾವು ತಿನ್ನೋ ತರಕಾರಿಗಳನ್ನು ಮೊದಲು ಬೆಳೆದಿದ್ದು ಎಲ್ಲಿ ಗೊತ್ತಾ..?
ನಾವು ನೀವೆಲ್ಲ...ದಿನನಿತ್ಯ ಸಾಕಷ್ಟು ತರಕಾರಿಗಳನ್ನು ಮನೆಗೆ ತರ್ತೀವಿ.... ಕೆಲವೊಂದು ತರಕಾರಿಗಳನ್ನು ಹಸಿ ಹಸಿಯಾಗಿ ತಿನ್ನುತ್ತೇವೆ... ಇನ್ನು ಕೆಲವೊಂದು ತರಕಾರಿಗಳನ್ನು ಬೇಯಿಸಿಕೊಂಡು ತಿನ್ನುತ್ತೇವೆ..ಯಾಕಪ್ಪ ಇವತ್ತು ತರಕಾರಿಗಳ ಬಗ್ಗೆ ಮಾತನಾಡುತ್ತೀದ್ದಾರೆ ಅಂತ ಯೋಚನೆ ಮಾಡುತ್ತಿದ್ದೀರಾ... ತರಕಾರಿ ಬಗ್ಗೆ ಏನ್ ವಿಷ್ಯಾ ಹೇಳ್ತಾರೆ ಅಂತ ಯೋಚನೆ ಮಾಡುತ್ತಿದ್ದರಾ...? ಎಸ್ ಇವತ್ತು ಒಂದಿಷ್ಟು ತರಕಾರಿಗಳ ಬಗ್ಗೆ ಮಾಹಿತಿ ಕೋಡ್ತೀವಿ.. ತಿಳಿದುಕೊಳ್ಳಿ....
ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ತರಕಾರಿಗಳ ಪಾತ್ರ ತುಂಬಾ ವಿಶಿಷ್ಟವಾದದ್ದು.. ಏಕೆಂದರೆ ತರಕಾರಿಗಳಲ್ಲಿ ಅಷ್ಟೊಂದು ವಿಟಮಿನ್ ಇದೆ.. ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.. ಹಾಗು ಯಾವುದೇ ಕಾಯಿಲೆಗಳು ನಮ್ಮ ಬಳಿ ಬರದಂತೆ ನೋಡಿಕೊಳ್ಳುತ್ತದೆ.. ಹಾಗಾಗಿ ತರಕಾರಿಯ ಪಾತ್ರ ನಮ್ಮ ಜೀವನದಲ್ಲಿ ತುಂಬಾ ಅವಶ್ಯಕವಾಗಿದೆ.
ಕ್ಯಾರೆಟ್ ಎಲ್ಲಿ ಬೆಳೆದಿದ್ದು ಗೊತ್ತಾ..
ಸಾಮಾನ್ಯವಾಗಿ ನಿಮಗೆಲ್ಲಾ ಕ್ಯಾರೆಟ್ ಗೊತ್ತೆ ಇರುತ್ತೆ.. ಆದರೆ ಅದರಲ್ಲಿ ಇರುವ ವಿಶೇಷತೆ ಮತ್ತು ಗುಣಗಳನ್ನು ತಿಳಿದುಕೊಂಡರೆ ನಿಜವಾಗ್ಲೋ ನೀವು ಕ್ಯಾರೆಟ್ ಪ್ರಿಯರಾಗೋದು ಗ್ಯಾರೆಂಟಿ. ಕ್ಯಾರೆಟ್‍ನಲ್ಲಿ ಬೀಟಾ ಕ್ಯಾರೆಟ್ ಅಂಶ ಹೆಚ್ಚಾಗಿರುತ್ತದೆ.. ಇದರಿಂದ ನಿಮ್ಮ ರಕ್ತದ ಚಲನೆ ಸರಿಯಾಗುತ್ತದೆ.ಇದನ್ನ ವೈದ್ಯಕೀಯ ಭಾಷೆಯಲ್ಲಿ ಕ್ಯಾರೊಟೆನೆಮಿಯಾ ಎಂದು ಕರೆಯುತ್ತಾರೆ. ಇದನ್ನ ಎಲ್ಲಿ ಬೆಳಿತಾರೆ ಇದರ ಮೂಲ ಅಂದರೆ ಹುಟಿದ್ದು ಎಲ್ಲಿ ಅಂತ ಗೊತ್ತಾ.... ಇದು ಪರ್ಶಿಯಾದ ಬೆಳೆ.... ಬರಿ ತಿನ್ನೋದು ಅಷ್ಟೆ ಅಲ್ಲ...ಅದನ್ನ ಎಲ್ಲಿ ಬೆಳೆಯುತ್ತಾರೆ ಅಂತ ತಿಳಿದುಕೊಳ್ಳಬೇಕು ಅಲ್ವ...
ಟಮೋಟ ಬೆಳೆಯನ್ನು ಮೊದಲು ಬೆಳೆದಿದ್ದು ಎಲ್ಲಿ ಅಂತಾ ಗೊತ್ತಾ...
ಟಮೋಟ... ನಿಮಗೆಲ್ಲಾ ಸಾಮಾನ್ಯವಾಗಿ ಗೊತ್ತೆ ಇರುತ್ತೆ...ನೋಡೋದಕ್ಕೆ ಗುಂಡು ಗುಂಡಾಗಿ ಕೆಂಪು ಕೆಂಪಾಗಿ ಇರೋ ಹಣ್ಣು ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ...ವಿಷಯ ಏನ್ ಗೊತ್ತಾ...ಇದೊಂದು ತರಕಾರಿ ಜಾತಿಗೆ ಸೇರಿರೋ ಹಣ್ಣು.. ಇದನ್ನ ತರಕಾರಿ ಅಂತ ಎಲ್ಲರೂ ತಿಳಿದುಕೊಂಡಿದ್ದಾರೆ. ಆದರೆ ಇದು ಒಂದು ಹಣ್ಣು.... ಈ ಹಣ್ಣನ್ನ ದಕ್ಷಿಣ ಅಮೇರಿಕಾದಲ್ಲಿ ಮೊದಲು ಬೆಳೆದಿದ್ದರು..
ಈರುಳ್ಳಿಯನ್ನು ಬೆಳೆದವರು ನಮ್ಮ ಏಷ್ಯಾದವರೆ...!
ಈರುಳ್ಳಿ.... ಈ ತರಕಾರಿನ ಕಂಡರೆ ಎಲ್ಲರಿಗೂ ಕೂಡ ಸ್ವಲ್ಪ ಬೇಜಾರ್ ಆಗುತ್ತೆ.. ಯಾಕಂದ್ರೆ ಈರುಳ್ಳಿಯನ್ನು ಅಚ್ಚುವಾಗ ಎಲ್ಲರ ಕಣ್ಣಲೂ ಕೂಡ ನೀರು ಬರುತ್ತದೆ... ಆಗ ಸಾಮಾನ್ಯವಾಗಿ ನಾವೆಲ್ಲ ಬೈಯ್ಕೊತ್ತೀವಿ... ಯಾರಪ್ಪ ಈ ಈರುಳ್ಳಿನ ಕಂಡು ಹಿಡಿದಿದ್ದು ಅಂತ... ವಿಷ್ಯ ಇರೋದೆ ಇಲ್ಲಿ... ಈರುಳ್ಳಿಯ ಉಗಮವಾಗಿದ್ದೆ ಏಷ್ಯಾದಲ್ಲಿ..... ಇನ್ ಮುಂದೆ ಈರುಳ್ಳಿ ಅಚ್ಚುವಾಗ ಬೈದುಕೊಂಡು ಅಚ್ಚಬೇಡಿ.. ಯಾಕಂದ್ರೆ ಕಂಡು ಹಿಡಿದಿದ್ದು ಎಷ್ಟೆ ಆಗಲಿ ನಮ್ಮ ಏಷ್ಯಾದವರೆ... ಅಲ್ವ..
ಎಲೆಕೋಸು ಬಗ್ಗೆ ನಿಮಗೆಷ್ಟು ಗೊತ್ತು...?
ಕ್ಯಾಬೇಜ್... ಎಲೆಕೋಸು... ಇದನ್ನ ಬಳಸೋದು ಸ್ವಲ್ಪ ಮಟ್ಟಿಗೆ ಕಡಿಮೆ. ಆದರೆ ಪಲ್ಯಗಳನ್ನ ಮಾಡೋದಕ್ಕೆ ಮಾತ್ರ ಯೂಸ್ ಮಾಡ್ತಾರೆ. ಆದರೆ ಇದನ್ನ ಬೆಳೆಯೋದು ಎಲ್ಲಿ ಅಂತ ಗೊತ್ತಾ.. ಇದನ್ನ ಬೆಳಿಯೋದು ಯೂರೋಪ್‍ನಲ್ಲಿ... ಕ್ಯಾಬೆಜ್ ಅನ್ನು ಮೊದಲನೆಯದಾಗಿ ಯುರೋಪ್ ಖಂಡದಲ್ಲಿ ಬೆಳೆದರು... ತದ ನಂತರ ಎಲ್ಲ ಕಡೆ ಹರಡಿತು..
ಹುರುಳಿಕಾಯಿಯ ಆಗಮ ಎಲ್ಲಿ ಅನ್ನೋದು ಗೊತ್ತಾ..?
ಬೀನ್ಸ್... ನಮ್ಮ ಕನ್ನಡದಲ್ಲಿ ಹೇಳಬೆಕಂದ್ರೆ ಹುರುಳಿಕಾಯಿ.. ಈ ತರಕಾರಿ ಪ್ರಯೋಜನವನ್ನು ದಿನನಿತ್ಯದಲ್ಲಿ ಸಾಕಷ್ಟು ಹೆಚ್ಚಾಗಿ ಪಡೆಯುತ್ತಾರೆ..ಸಾಂಬಾರ್ ಆಗಿರಬಹುದು... ಪಲ್ಯ ಆಗಿರಬಹುದು ಈ ರೀತಿಯ ಆಹಾರಗಳನ್ನು ಮಾಡಿ ತಿನ್ನುತ್ತ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತೇವೆ.. ಆದರೆ ಈ ಬೀನ್ಸ್ ಅಂದರೆ ಹುರುಳಿಕಾಯಿಯನ್ನು ಎಲ್ಲಿ ಬೆಳೆಯುತ್ತಾರೆ ಅಂತ ಗೊತ್ತಾ.. ಉತ್ತರ ಆಫ್ರಿಕ ಮತ್ತು ದಕ್ಷಿಣ ಏಷಿಯಾಗಳಲ್ಲಿ ಬೀನ್ಸ್ ಅನ್ನು ಬೆಳೆಯಲು ಶುರು ಮಾಡಿದರು...
Comments