ಈ ಬಾರಿ ಗಣೇಶ ಕೂರಿಸುವುದಕ್ಕೂ ಬಾಡಿಗೆ ಕಟ್ಟಬೇಕು..!?
ಗಣೇಶ ಹಬ್ಬ ಬಂತು ಅಂದ್ರೆ ಸಾಕು ಹುಡುಗರಿಗೆಲ್ಲಾ ಏನೋ ಒಂಥರಾ ಖುಷಿ. ತಮ್ಮ ತಮ್ಮ ಏರಿಯಾದಲ್ಲಿ ಗಣೇಶ ಕೂರಿಸಿ ಹಾಡು ಹೇಳುತ್ತಾ ಡ್ಯಾನ್ಸ್ ಮಾಡೋದೆ ಒಂಥರಾ ಚಂದ.. ಆದರೆ ಇದೀಗ ಈ ಖುಷಿಗೆ ಬ್ರೇಕ್ ಬಿದ್ದಂತಾಗಿದೆ.
ಈ ಬಾರಿ ಗಣೇಶ ಹಬ್ಬಕ್ಕೆ ಗಣೇಶ ಕೂರಿಸುವವರಿಗೆ ಬಿಬಿಎಂಪಿ ಶಾಕ್ ನೀಡಲು ಮುಂದಾಗಿದೆ. ಬೆಂಗಳೂರಿನಲ್ಲಿ ಭಾಗಶಃ ಬಿಬಿಎಂಪಿ ರಸ್ತೆಗಳಲ್ಲೇ ಪೆಂಡಾಲ್ ಹಾಕಿ ಗಣೇಶ ಕೂರಿಸಿತ್ತಾರೆ. ಹೀಗಾಗಿ ಪ್ರತಿಷ್ಟಾಪನೆ ಮಾಡುವವರು ಬಿಬಿಎಂಪಿ ಪರ್ಮಿಶನ್ ಪಡೆದು ಬಾಡಿಗೆ ಕಟ್ಟಬೇಕು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಬಿಬಿಎಂಪಿ ಮೂರು ದಿನಕ್ಕೆ ,ಐದು ದಿನಕ್ಕೆ ,ಏಳು ದಿನಕ್ಕೆ, ಹೀಗೆ ದಿನದ ಲೆಕ್ಕದಲ್ಲಿ ಬಾಡಿಗೆ ಫಿಕ್ಸ್ ಮಾಡಿದೆ.. ಇನ್ನೂ ಮುಂದೆ ಯಾವ್ಯಾವುದಕ್ಕೆ ಬಾಡಿಗೆ ಕಟ್ಟಬೇಕೋ ಗೊತ್ತಿಲ್ಲ..
Comments