2000 ರೂ ನೋಟ್ ಬ್ಯಾನ್ ಆಗುತ್ತಾ..!? ಈ ಬಗ್ಗೆ ಕೇಂದ್ರ ಸರ್ಕಾರ ಹೇಳೋದೇನು?
ನವೆಂಬರ್ 8 2016 ರಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ 500 ಹಾಗೂ 1000 ರು. ಮುಖ ಬೆಲೆಯ ನೋಟುಗಳನ್ನು ಬ್ಯಾನ್ ಮಾಡಿ ಎಂಬ ಆದೇಶವನ್ನು ಹೊರಡಿಸಿತ್ತು. ಅದಾದ ನಂತರ ಹೊಸದಾಗಿ 2000 ರೂ ನೋಟುಗಳನ್ನು ಚಲಾವಣೆಗೆ ತರಲಾಗಿತ್ತು.
ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನೋಟ್ ಬ್ಯಾನ್ ಮಾಡಿದ ನಂತರ ಚಲಾವಣೆಗೆ ಬಂದಂತಹ 2000 ರೂ ನೋಟ್ ಹಿಂಪಡೆಯುವ ಬಗ್ಗೆ ಯಾವುದೇ ಮಾತಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಹಿಂದೆಯೂ ಹಲವು ಬಾರಿ ಈ ರೀತಿಯಾಗಿ ಸುದ್ದಿಗಳು ಹರಿದಾಡಿದ್ದು ಆದರೆ ಅಂತಹ ಯಾವುದೇ ರೀತಿಯ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿಲ್ಲ ಎಂದು ಕೇಂದ್ರದ ಹಣಕಾಸು ಖಾತೆ ರಾಜ್ಯ ಸಚಿವರಾದ ರಾಧಾಕೃಷ್ಣನ್ ಲೋಕಸಭೆಯಲ್ಲಿ ಮಾಹಿತಿ ನೀಡಿ ಸ್ಪಷ್ಟಿಕರಿಸಿದರು..
Comments