ರಾಜ್ಯ ಸರ್ಕಾರದಿಂದ ವರಮಹಾಲಕ್ಷ್ಮಿ ಹಬ್ಬಕ್ಕೆ ಸಿಗ್ತಿದೆ ಬಂಪರ್ ಆಫರ್

ರಾಜ್ಯ ಸರ್ಕಾರವು ವರ ಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಬಂಪರ್ ಆಫರ್ ನೀಡ್ತಿದೆ. ರೇಷ್ಮೆ ಇಲಾಖೆ ಇತ್ತೀಚಿಗೆ ಘೋಷಿಸಿದ್ದ ಮೈಸೂರು ಸಿಲ್ಕ್ ಸೀರೆಗಳ ರಿಯಾಯತಿ ಮಾರಾಟವನ್ನು ವಿಸ್ತರಿಸುವ ಪ್ಲಾನ್ ಅನ್ನು ಮಾಡಿದೆ.
ರೇಷ್ಮೆ ಇಲಾಖೆಯ ಸಚಿವರಾದ ಸಾ.ರಾ. ಮಹೇಶ್ ವರಮಹಾಲಕ್ಷ್ಮೀ ಹಬ್ಬಕ್ಕೆ ವಿಶೇಷವಾಗಿ ಇಲಾಖೆಯ ವತಿಯಿಂದ ರೇಷ್ಮೆ ಸೀರೆಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಹೇಳಿದರು. ರೇಷ್ಮೆ ಇಲಾಖೆಯ ವತಿಯಿಂದ ನೀಡಲಾಗುತ್ತಿರುವ ರಿಯಾಯತಿ ದರದ ರೇಷ್ಮೆ ಸೀರೆಗಳನ್ನು ಕೇವಲ ವರಮಾಲಕ್ಷ್ಮೀ ವ್ರತಕ್ಕೆ ಮಾತ್ರ ಸೀಮಿತ ಮಾಡದೇ, ಇನ್ನೂ ಮುಂದಿನ ಮೂರು ತಿಂಗಳುಗಳ ಕಾಲ ಮುಂದುವರೆಸಲು ಸಚಿವರು ಪ್ಲಾನ್ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
Comments