ಭಾರತದಲ್ಲೂ ನಿರ್ಮಾಣವಾಗ್ತಿದೆಯಾ ಮಹಾಗೋಡೆ..!?
ಪ್ರಪಂಚದ ಏಳು ಅಧ್ಬುತಗಳಲ್ಲಿ ಚೀನಾದ ಮಹಾಗೋಡೆಯು ಕೂಡ ಒಂದು. ಚೀನಾದ ಮಹಾಗೋಡೆ ಬಗ್ಗೆ ನೀವೆಲ್ಲಾ ಸಾಮಾನ್ಯವಾಗಿ ಕೇಳೆ ಇರ್ತಿರಾ. ಭಾರತದಲ್ಲೂ ಕೂಡ 500 ಕಿಲೋಮೀಟರ್ ಮಹಾಗೋಡೆ ನಿರ್ಮಾಣವಾಗುತ್ತಿರುವುದರ ಬಗ್ಗೆ ನಿಮಗೆ ಗೊತ್ತಿದೆಯಾ?
ಆದರೆ ನಿರ್ಮಾಣವಾಗುತ್ತಿರುವುದು ಕೇವಲ ಇದು ಒಂದೇ ಒಂದು ಗೋಡೆಯಲ್ಲ. ಬದಲಿಗೆ ಮುಂಬೈ- ದಿಲ್ಲಿ ರೈಲು ಹಳಿಯ ಪಕ್ಕದಲ್ಲಿ ರೈಲು ಸಂಚಾರವನ್ನು ಸುಲಭಗೊಳಿಸುವ ಸಲುವಾಗಿ ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ರಕ್ಷಣಾ ಗೋಡೆ ನಿರ್ಮಿಸಲು ರೈಲ್ವೆ ಇಲಾಖೆ ಈಗಾಗಲೇ ಮುಂದಾಗಿದೆ. ರೈಲು ಹಳಿಗಳ ಬದಿಗಳಲ್ಲಿ 500 ಕಿಲೋಮೀಟರ್ ಆವರಣದ ಗೋಡೆಯು ನಿರ್ಮಾಣವಾಗಲಿದ್ದು, ಹಳಿಗಳಲ್ಲಿ ಮನುಷ್ಯ ಹಾಗೂ ಜಾನುವಾರುಗಳು ಓಡಾಡದಂತೆ ತಡೆಯಲು ಮತ್ತು ಸುಗಮ ಸಂಚಾರಕ್ಕಾಗಿ ಈ ಯೋಜನೆ ಕಾಮಗಾರಿ ಆರಂಭಿಸಲು ಕೇಂದ್ರ ಸರ್ಕಾರ ಈಗಾಗಲೇ ಗ್ರೀನ್ ಸಿಗ್ನಲ್ ಅನ್ನು ಕೊಟ್ಟಿದೆ. ಮನುಷ್ಯ ಮತ್ತು ಜಾನುವಾರುಗಳು ಹಳಿಯಲ್ಲಿ ಚಲಿಸುವುದರಿಂದ ರೈಲುಗಳ ವೇಗಕ್ಕೆ ತಡೆಯಾಗಿದ್ದು, ಇದನ್ನು ನಿವಾರಿಸುವುದು ಯೋಜನೆಯ ಉದ್ದೇಶ ಎಂದು ಭಾರತೀಯ ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ಮಹಾಗೋಡೆಯ ಬಗ್ಗೆ ಯೋಚಿಸಿದ್ದಾರೆ.ಮುಂಬೈ- ದಿಲ್ಲಿ ಕಾರಿಡಾರ್ ಅತಿವೇಗದ ವಲಯವಾಗಿ ಮಾರ್ಪಡುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ. ಹಳಿ ಬದಲಾಯಿಸಿದ ತಕ್ಷಣವೇ ರೈಲುಗಳು ಗರಿಷ್ಠ ವೇಗದ ಮಿತಿಯಾದ 160 ಕಿಲೋಮೀಟರ್ ವೇಗ ಪಡೆಯಲು ಇದು ನೆರವಾಗಲಿದೆ ಎಂದು ವಿವರಿಸಿದ್ದಾರೆ.
Comments