ಲೇಡಿಸ್ ಕಾನ್‌ಸ್ಟೇಬಲ್‌ಗಳ ಸಮವಸ್ತ್ರ ಬದಲಾವಣೆಗೆ ಚಿಂತನೆ

ಕರ್ನಾಟಕ ರಾಜ್ಯದ ಪೊಲೀಸ್ ಕಾನ್‌ಸ್ಟೇಬಲ್‌ಗಳ ಟೋಪಿ ಬದಲಾವಣೆಗೆ ಚಿಂತನೆ ನಡೆಯುತ್ತಿರುವ ಸಮಯದಲ್ಲಿಯೇ ಲೇಡಿಸ್ ಕಾನ್‌ಸ್ಟೇಬಲ್‌ಗಳ ಸಮವಸ್ತ್ರ ಬದಲಾವಣೆ ಬಗ್ಗೆಯೂ ಕೂಡ ಚರ್ಚೆ ನಡೆದಿದೆ. ಇಷ್ಟು ದಿನ ಮಹಿಳಾ ಕಾನ್ ಸ್ಟೇಬಲ್ ಸೀರೆ ಹಾಕಿಕೊಳ್ಳುತ್ತಿದ್ದರು.
ಇನ್ನು ಮುಂದೆ ಸೀರೆ ಬದಲಿಗೆ ಪ್ಯಾಂಟ್, ಶರ್ಟ್ ಸಮವಸ್ತ್ರ ನಿಯಮ ಜಾರಿಗೆ ತರುವ ಬಗ್ಗೆ ಈಗಾಗಲೇ ಪರಿಶೀಲಿಸಲಾಗುತ್ತಿದೆ ಎಂದು ಗೃಹ ಸಚಿವರು ಹಾಗೂ ಉಪಮುಖ್ಯಮಂತ್ರಿಗಳಾದ ಡಾ. ಪರಮೇಶ್ವರ್ ಸುಳಿವುವನ್ನು ನೀಡಿದ್ದಾರೆ. ಖಾಸಗಿ ಭೇಟಿಗೆ ಭಟ್ಕಳಕ್ಕೆ ಹೋಗುವ ಮೊದಲು ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಹಿಳಾ ಪೊಲೀಸ್ ಸಿಬ್ಬಂದಿಗೆ ಸೀರೆಯಲ್ಲಿ ಕರ್ತವ್ಯ ಮಾಡಲು ಕಷ್ಟವಾಗುತ್ತಿರುವುದರಿಂದ ಸಮವಸ್ತ್ರ ಬದಲಾಯಿಸುವ ಕುರಿತು ಡಿಜಿಪಿ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ತಿಳಿಸಿದರು.
Comments