ಆನ್’ಲೈನ್ ಅವಾಂತರ:ಪಿಯು ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್..!

ರಾಜ್ಯ ಪಿಯು ಮಂಡಳಿಯು ಇತ್ತೀಚೆಗಷ್ಟೇ ವಿದ್ಯಾರ್ಥಿಗಳ ಮಾರ್ಕ್ಸ್ ಕಾರ್ಡ್ಗಳನ್ನು ಆನ್ ಲೈನ್ ನಲ್ಲಿ ಸಿಗುವಂತೆ ಮಾಡಿದೆ. ಇದೀಗ ಆನ್ ಲೈನ್ ನಲ್ಲಿ ಮಾರ್ಕ್ಸ್ ಕಾರ್ಡ್ ಸಿಗುವಂತೆ ಮಾಡಿದ್ದಂತಹ ರಾಜ್ಯ ಪಿಯು ಮಂಡಳಿಯು, ಆನ್ ಸೇಫ್ ಟೆಕ್ನಾಲಜಿಯ ಮೊರೆ ಹೋಗಿದ್ದು, ಇದರಿಂದಾಗಿ ಲಕ್ಷಾಂತರ ಮಕ್ಕಳ ಉಜ್ವಲ ಭವಿಷ್ಯವು ಆತಂಕಕ್ಕೆ ಸಿಲುಕುವಂತಾಗಿದೆ.
ನೂತನ ಟೆಕ್ನಾಲಜಿ ಡಿಜಿ ಲಾಕರ್ ಬಳಸುವ ಮೂಲಕ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದ ರಾಜ್ಯ ಪಿಯು ಮಂಡಳಿಗೆ ಆತಂಕ ಶುರುವಾಗಿದೆ. ಇಲ್ಲಿ ಯಾವ ಮಾರ್ಕ್ಸ್ ಕಾರ್ಡ್ ಸೇಫ್ ಆಗಿಲ್ಲ ಎಂಬ ಆತಂಕಕಾರಿ ಸುದ್ದಿ ತಿಳಿದುಬಂದಿದೆ. ಡಿಜಿ ಲಾಕರ್ ಟೆಕ್ನಾಲಜಿಯು ಕೇಂದ್ರೀಕೃತ ಸರ್ವರ್ ಮೂಲಕ ಕಾರ್ಯ ನಿರ್ವಹಿಸುತ್ತಿದೆ.ಇಲ್ಲಿ ಯಾವುದೇ ಹ್ಯಾಕರ್ ಬೇಕಾದರೂ ಕೂಡ ಸರಳವಾಗಿ ಇದನ್ನು ಹ್ಯಾಕ್ ಮಾಡಬಹುದಾಗಿದೆ, ನ್ಯಾಶನಲ್ ಅಕಾಡಿಮೆಕ್ ಡೆಪಾಸಿಟರಿ ಎಂಬ ಸಂಟ್ರಲಸಡ್ ಸರ್ವರ್ ಅನ್ನು ಕೂಡ ಈ ಹಿಂದೆಯೆ ಹ್ಯಾಕ್ ಮಾಡಲಾಗಿತ್ತು. ಹಾಗಾಗಿ ಡಿಜಿಲಾಕರ್ ನಲ್ಲಿ ಅಂಕಪಟ್ಟಿ ಸೇವ್ ಮಾಡಿ ಆನ್ ಲೈನ್ ನಲ್ಲಿ ದೊರೆಯುವಂತೆ ಮಾಡುವ ಪಿಯ ಮಂಡಳಿ ವಿದ್ಯಾರ್ಥಿಗಳ ಭವಿಷ್ಯ ಇದೀಗ ಆತಂಕಕ್ಕೆ ಸಿಲುಕಿದಂತಾಗಿದೆ. ಇದರ ಬಗ್ಗೆ ಯಾವ ರೀತಿಯ ಕ್ರಮವನ್ನು ಜರುಗಿಸುತ್ತಾರೆ ಅನ್ನೋದನ ಕಾದು ನೋಡಬೇಕು.
Comments