ಇಂಡಿಯನ್ ಬ್ಯಾಂಕ್‌ನಲ್ಲಿ ಖಾಲಿಯಿರುವ 417 ಹುದ್ದೆಗಳಿಗೆ ಅರ್ಜಿ ಆಹ್ವಾನ

ಖಾಲಿಯಿರುವ 417 ಪ್ರೊಬೇಷನರಿ ಹುದ್ದೆಗಳಿಗೆ ಇಂಡಿಯನ್ ಬ್ಯಾಂಕ್ ನಿಂದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬ್ಯಾಂಕ್ ನ ಅಫಿಷಿಯಲ್ ವೆಬ್ ಸೈಟ್ ಆದ indianbank.in. ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಒಂದು ವರ್ಷದ ಬ್ಯಾಂಕಿಂಕ್ ಪಿಜಿ ಕೋರ್ಸ್[ಪಿಜಿಡಿಬಿಎಫ್] ಗೆ ದಾಖಲಾತಿ ಮಾಡಿಕೊಳ್ಳುವುದುರ ಮೂಲಕ ಆರಂಭಿಕ ಹಂತವು ಶುರುವಾಗಲಿದೆ. ಅರ್ಜಿ ಸಲ್ಲಿಕೆಗೆ ಆಗಸ್ಟ್ 27 ಕೊನೆಯ ದಿನಾಂಕವಾಗಿದ್ದು, ಅಕ್ಟೋಬರ್ 6 ರಂದು ಪ್ರಿಲೀಮ್ಸ್ ಪರೀಕ್ಷೆ ನಡೆಯಲಿದೆ. ಆನ್ ಲೈನ್ ಮೂಲಕವೇ ಪರೀಕ್ಷೆ ನಡೆಯಲಿದ್ದು ಪರ್ಸನಲ್ ಸಂದರ್ಶನ ಸಹ ಇರಲಿದೆ. ಸೆಪ್ಟೆಂಬರ್ 24 ಪ್ರೀಲಿಮ್ಸ್ ಪರೀಕ್ಷೆಗೆ ಆನ್ ಲೈನ್ ಅಪ್ಲಿಕೇಶನ್ ಡೌನಲೋಡ್ ಮಾಡಿಕೊಳ್ಳಬಹುದು, ಅಕ್ಟೋಬರ್6 ಆನ್ ಲೈನ್ ಪ್ರಿಲಿಮ್ಸ್ ಪರೀಕ್ಷೆ ನಡೆಯಲಿದ್ದು, ಅಕ್ಟೋಬರ್ 17 ಆನ್ ಲೈನ್ ಪರೀಕ್ಷೆ ಫಲಿತಾಂಶ ಅಕ್ಟೋಬರ್ 22 ಮುಖ್ಯ ಪರೀಕ್ಷೆಗೆ ಹಾಲ್ ಟಿಕೆಟ್ ಡೌನ್ ಲೋಡ್ ಮಾಡಿಕೊಳ್ಳಬೇಕು ಹಾಗೂ ಮುಖ್ಯಪರೀಕ್ಷೆ ನವೆಂಬರ್ 4 ನಡೆಯುತ್ತದೆ.
Comments