ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ಸಿಗ್ತಿದೆ 60 ಸಾವಿರ ಮನೆಗಳು…! ಯಾರು ಯಾರಿಗೆ ಗೊತ್ತಾ..?

ಮನೆ ನಿರ್ಮಾಣ ಅನ್ನೋದು ಪ್ರತಿಯೊಬ್ಬರ ಕನಸು.. ಆ ಕನಸಿನಂತೆ ಒಂದು ಪುಟ್ಟ ಮನೆ ಇದ್ರೆ ಸಾಕು..ಸ್ವಂತ ಮನೆಯಾಗಿರಬೇಕು ಎಂದು ಯೋಚನೆ ಮಾಡುತ್ತಾರೆ. ಇದೇ ನಿಟ್ಟಿನಲ್ಲಿ ರಾಜ್ಯದ ನಾನಾ ನಗರ ಪ್ರದೇಶಗಳಲ್ಲಿ ಸಿಎಂ ವಸತಿ ಯೋಜನೆಯಡಿಯಲ್ಲಿ 60 ಸಾವಿರ ಮನೆಗಳ ನಿರ್ಮಾಣಕ್ಕೆ ಆಗಸ್ಟ್ 12 ರಂದು ಹುಬ್ಬಳ್ಳಿಯಲ್ಲಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರು ಶಂಕು ಸ್ಥಾಪನೆಯನ್ನು ನಡೆಸಲಿದ್ದಾರೆ.
ಒಂದೊಂದು ಮನೆಗೂ ಸುಮಾರು 4.5 ಲಕ್ಷ ರೂ. ವೆಚ್ಚದಲ್ಲಿ 60 ಸಾವಿರ ಮನೆಗಳನ್ನು ನಿರ್ಮಿಸುವ ಈ ಯೋಜನೆ ಸಂಬಂಧವಾಗಿ ಕರೆದಿದ್ದಂತಹ ಟೆಂಡರ್ ಪ್ರಕ್ರಿಯೆ ಇದೀಗ ಪೂರ್ಣಗೊಂಡಿದೆ ಎಂದು ವಸತಿ ಸಚಿವರಾದ ಯು.ಟಿ. ಖಾದರ್ ತಿಳಿಸಿದ್ದಾರೆ. ಬಿಪಿಎಲ್ ಕುಟುಂಬಗಳ ಆದಾಯ ಮಿತಿಯನ್ನುಪರಿಷ್ಕರಣೆ ಮಾಡಿದ ಬಳಿಕ ವಸತಿ ಯೋಜನೆಯ ಫಲಾನುಭವಿಗಳಿಗೆ ಸರ್ಕಾರ ಅನುದಾನ ಬಿಡುಗಡೆಯಲ್ಲಿ ಉಂಟಾದ ತೊಡಕು ನಿವಾರಣೆಗೆ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ವಸತಿ ಸಚಿವರಾದ ಯು,ಟಿ ಖಾದರ್ ತಿಳಿಸಿದ್ದಾರೆ.
Comments