ಈಗ ಬಿಪಿಎಲ್ ಕಾರ್ಡ್ ಪಡೆಯೋದು ತುಂಬಾ ಸುಲಭ..! ಹೇಗೆ ಅಂತಿರಾ..?

ಬಿಪಿಎಲ್ ಕಾರ್ಡನ್ನು ಪಡೆಯಲು ಇನ್ನು ಮುಂದೆ ಯಾವ ಕಚೇರಿಗೂ ಅಲೆದಾಡಬೇಕಿಲ್ಲ. ಇನ್ನು ಮುಂದೆ ಎಲ್ಲವೂ ಬೆರಳ ತುದಿಯಲ್ಲೇ ಸಿಗಲಿದೆ. ಆನ್ ಲೈನ್ ಮೂಲಕವೂ ಪಡಿತರ ಚೀಟಿ ಪಡೆಯಲು ಅರ್ಜಿಯನ್ನು ಸಲ್ಲಿಸಬಹುದು.
ಪಡಿತರ ಚೀಟಿಯನ್ನು ರಾಜ್ಯ ಆರೋಗ್ಯ ಕಾರ್ಡ್ ಆಗಿಯೂ ಕೂಡ ಬಳಕೆ ಮಾಡಬಹುದಿತ್ತು. ಹಾಗಾಗಿ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಹೃದಯ ಸಂಬಂಧಿ ರೋಗ, ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೂ ಕೂಡ ಬಿಪಿಎಲ್ ಕಾರ್ಡ್ ಮೂಲಕ ಉಚಿತ ಚಿಕಿತ್ಸೆಯನ್ನು ಪಡೆಯಬಹುದಾಗಿದೆ.ಪಡಿತರ ಚೀಟಿ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ತೊಂದರೆಯಾಗಿರುವುದರಿಂದ ಆಹಾರ ಮತ್ತು ನಾಗರಿಕ ಖಾತೆ ಸಚಿವ ಜಮೀರ್ ಅಹಮದ್ ಅವರು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ, ಸಾಫ್ಟ್ ವೇರ್ ಅನ್ನು ಎರಡು ದಿನದಲ್ಲಿ ಬದಲಾವಣೆ ಮಾಡುವಂತೆ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ, ಶೇ.8ರಷ್ಟು ಹಣ ಉಳಿತಾಯವಾಗಲಿದೆ. ಪಡಿತರ ವ್ಯವಸ್ಥೆಗಾಗಿಯೇ ಪ್ರಸಕ್ತ ವರ್ಷ 3,393 ಕೋಟಿ ರೂ. ವೆಚ್ಚ ಮಾಡಲಾಗುವುದು. ಇದು ಕಳೆದ ವರ್ಷಕ್ಕಿಂತಲೂ ಕಡಿಮೆಯದ್ದಾಗಿದೆ. ರಾಜ್ಯದಲ್ಲಿ ಪ್ರಸ್ತುತ 1.13 ಕೋಟಿ ರೂ. ಬಿಪಿಎಲ್ ಕಾರ್ಡ್ ಗಳು ಇವೆ ಎಂದು ಹೇಳಲಾಗಿದೆ.
Comments