ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್..! ಇವರಿಗೆ ಸಿಗಲಿದೆ ಬಡ್ತಿ ಮೀಸಲಾತಿ..

ಎಸ್ಸಿ/ಎಸ್ಟಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ರಾಜ್ಯದ ನಿಲುವಿಗೆ ಇದೀಗ ಕೇಂದ್ರ ಸರ್ಕಾರದ ಬೆಂಬಲವೂ ಕೂಡ ಸಿಕ್ಕಿದ್ದು, ಈ ಸಮುದಾಯ ಶೇ. 22.5 ಬಡ್ತಿ ಮೀಸಲಾತಿ ಪಡೆಯಲು ಅರ್ಹ ಎಂದು ಕೇಂದ್ರ ಸುಪ್ರೀಂಕೋರ್ಟ್ ನಲ್ಲಿ ತಿಳಿಸಿದೆ.
2006 ರಲ್ಲಿ ಎಂ.ನಾಗರಾಜು ವರ್ಸಸ್ ಕೇಂದ್ರ ಸರ್ಕಾರ ಪ್ರಕರಣದ ತೀರ್ಪಿನ ಮರುಪರಿಶೀಲನೆ ಅಗತ್ಯ ಎಂದು ಸಲ್ಲಿಸಲಾಗಿರುವ ಹಲವು ಅರ್ಜಿಗಳ ವಿಚಾರಣೆ ಪ್ರಾರಂಭಿಸಿರುವ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸಾಂವಿಧಾನಿಕ ಪೀಠ, 12 ವರ್ಷಗಳ ನಂತರ ತೀರ್ಪಿನ ಬಗ್ಗೆ ಮರುಪರಿಶೀಲನೆ ಅಗತ್ಯವಿದೆಯೇ ಎಂದು ಪ್ರಶ್ನಿಸಿದ ವೇಳೆ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ಬಡ್ತಿ ಮೀಸಲಾತಿ ಪರ ನಿಲುವನ್ನು ಮುಂದಿಟ್ಟಿದ್ದರು.ಸುಪ್ರೀಂ ಕೋರ್ಟ್ 2006 ರಲ್ಲಿ ಎಸ್ಸಿ ಎಸ್ಟಿ ನೌಕರರು ಅರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದ್ದಾರೆ ಎಂಬುದಕ್ಕೆ ಸರ್ಕಾರಕ್ಕೆ ಸೂಕ್ತ ದಾಖಲೆ ದಸ್ತಾವೇಜುಗಳನ್ನು ನೀಡಿದರು ಅಂಥವರನ್ನು ಮಾತ್ರ ಬಡ್ತಿ ಮೀಸಲಾತಿಗೆ ಪರಿಗಣಿಸಬಹುದು ಎಂದು ಸುಪ್ರೀಂಕೋರ್ಟ್ 2006 ರ ತೀರ್ಪಿನಲ್ಲಿ ತಿಳಿಸಲಾಗಿತ್ತು. ಈ ಸಮುದಾಯ ಶೇ. 22.5 ಬಡ್ತಿ ಮೀಸಲಾತಿ ಪಡೆಯಲು ಅರ್ಹ ಎಂದು ಕೇಂದ್ರ ಸುಪ್ರೀಂಕೋರ್ಟ್ ನಲ್ಲಿ ತಿಳಿಸಿದೆ.
Comments