ಬೇರೆಯವರ ಆಧಾರ್ ಕಾರ್ಡ್ ನಂಬರ್ ಯೂಸ್ ಮಾಡ್ತಿದ್ದೀರಾ..?ಹಾಗಾದ್ರೆ ನಿಮಗೆ ಜೈಲು ಶಿಕ್ಕೆ ತಪ್ಪಿದ್ದಲ್ಲ..!

ಇತ್ತಿಚಿಗೆ ಎಲ್ಲಾ ಕಡೆಗಳಲ್ಲೂ ಕೂಡ ಆಧಾರ್ ಕಾರ್ಡ್ ಅನ್ನು ಕಡ್ಡಾಯ ಮಾಡುತ್ತಿದ್ದಾರೆ.ಆಧಾರ್ ಕಾರ್ಡ್ ಹೊಂದಿರುವ ವ್ಯಕ್ತಿಯು ಈ ಸುದ್ದಿಯನ್ನ ಓದಲೇಬೇಕು. ಆಧಾರ್ ಪ್ರಾಧಿಕಾರವು ಪ್ರತಿಯೊಬ್ಬ ಆಧಾರ್ ಕಾರ್ಡ್ ಹೊಂದಿರುವ ವ್ಯಕ್ತಿಗೆ ಮುಖ್ಯವಾದ ಸೂಚನೆಯೊಂದನ್ನು ನೀಡಿದೆ.
ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷರಾಗಿರುವಂತಹ R S ಶರ್ಮ ಅವರು ಆಧಾರ್ ಕುರಿತು ಹೇಳಿರುವ ಸವಾಲಿನ ಹೇಳಿಕೆಯೊಂದು ಗೊಂದಲ ಮತ್ತು ವಿವಾದಕ್ಕೆ ಗುರಿಯಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಅಂದರೆ UIDAI ಸಾರ್ವಜನಿಕವಾಗಿ ನಿಮ್ಮ ಆಧಾರ್ ಸಂಖ್ಯೆಯನ್ನ ಯಾರ ಬಳಿಯೂ ಹಂಚಿಕೊಳ್ಳಬೇಡಿ ಎಂದು ಜನರಿಗೆ ಮನವಿಯ ಮೂಲಕ ತಿಳಿಸಿದ್ದಾರೆ.ಈ ಕುರಿತು ಪ್ರಾಧಿಕಾರವು ಅಧಿಕೃತ ಪ್ರಕಟಣೆಯಲ್ಲೂ ಕೂಡ ತಿಳಿಸಿದೆ, ನಿಮ್ಮಆಧಾರ್ ಸಂಖ್ಯೆಯನ್ನ ಸಾರ್ವಜನಿಕವಾಗಿ ಅಂಚಿಕೊಳ್ಳುವ ಚಟುವಟಿಕೆ ಕಾನೂನಿಗೆ ವಿರುದ್ದವಾದದ್ದು ಎಂದು UIDAI ತಿಳಿಸಿದೆ, ಅಲ್ಲದೆ ಇತರ ಯಾವುದೋ ಉದ್ದೇಶಕ್ಕೆ ಮತ್ತೊಬ್ಬರ ಆಧಾರ್ ಸಂಖ್ಯೆಯನ್ನ ಉಪಯೋಗ ಮಾಡಿದರೆ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
Comments