21ವರ್ಷಕ್ಕೆ ಕಾಲಿಟ್ಟ ಪ್ರತಿಯೊಂದು ಹೆಣ್ಣು ಕೂಡ ಇದನ್ನೊಮ್ಮೆ ಓದಲೇಬೇಕು..!

02 Aug 2018 2:15 PM | General
411 Report

ಹೆಣ್ಣುಮಕ್ಕಳಿಗೆ 20 ವರ್ಷ ದಾಟಿದ ಮೇಲೆ ಅವರ ವರ್ತನೆಯಲ್ಲಿ ಸಾಕಷ್ಟು  ಬದಲಾವಣೆ ಆಗುವುದರ ಜೊತೆಗೆ ಕೆಲವು ಕೆಲಸಗಳನ್ನು ಮಾಡುವುದಕ್ಕೆ ಶುರು ಮಾಡುತ್ತಾರೆ…ನಮ್ಮ ಮನೆಯಲ್ಲಿ ಹೆಣ್ಣುಮಕ್ಕಳಿದ್ದರೆ ಈ ಬದಲಾವಣೆಯನ್ನು ಗಮನಿಸಬಹುದು. ವಯಸ್ಸಿಗೆ ತಕ್ಕಂತೆ ಕೆಲವು ಬದಲಾವಣೆಗಳು ಕೂಡ ಆಗುತ್ತವೆ.

ಮಹಿಳೆಯರ ಅಂತರಂಗದಲ್ಲಿ ಅನೇಕ ಬದಲಾವಣೆಗಳು ವಯಸ್ಸಿಗೆ ತಕ್ಕಂತೆ ಬದಲಾಗುತ್ತಿರಯುತ್ತವೆ ಅದರಲ್ಲಿ ಈ ಬದಲಾವಣೆಗಳೂ ಕೂಡ ಇರುತ್ತವೆ ಎಂದು ಮನೋವೈದ್ಯರು ಹೇಳಿದ್ದಾರೆ. 20 ವರ್ಷ ದಾಟಿದ ಹೆಣ್ಣು ಮಕ್ಕಳು ಯೋಚಿಸುವುದನ್ನ ಕಲಿಯುತ್ತಾರೆ ಮೊದಲಿನಂತೆ ಕೋಪ, ಹಠಗಳನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಮೊದಲ ರೀತಿ ನನಗೆ ಇದೇ ಬೇಕು ಅದೇ ಬೇಕು ಎನ್ನುವ ಹಠ ತನವನ್ನು ಬಿಟ್ಟು ತ್ಯಾಗ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳುತ್ತಾರೆ. 20 ರ ನಂತರ ಮನೆಯಲ್ಲಿ ಕಷ್ಟ ಸುಖಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಪ್ರಾರಂಭಿಸುತ್ತಾಳೆ ಜೊತೆಗೆ ಮನೆಯವರ ಕಷ್ಟಗಳಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳುತ್ತಾಳೆ. ಈ ವಯಸ್ಸಿಗಾಗಲೇ ಆಕೆ ಮನೆಯನ್ನು ನಿಭಾಯಿಸಲು ಸಿದ್ದಳಾಗಿರುತ್ತಾಳೆ. ಒಟ್ಟಿನಲ್ಲಿ 20 ದಾಟಿದ ಮೇಲೆ ಹುಡುಗಿಯರು ಜೀವನದಲ್ಲಿ ನಾವು ಏನು ಮಾಡಬೇಕು. ಹೇಗೆ ಇರಬೇಕು ಎನ್ನುವುದರ ಬಗ್ಗೆ ಯೋಚಿಸಿ ಆ ನಿಟ್ಟಿನಲ್ಲಿ ಬದಲಾಗುವುದಕ್ಕೆ ಮುಂದಾಗುತ್ತಾರೆ ಎಂದು ಸಂಶೋಧನೆ ಮಾಡಿರುವ ಅನೇಕ ಮನೋವೈದ್ಯರ ಮಾತಾಗಿದೆ.

Edited By

Manjula M

Reported By

Manjula M

Comments