ಕಾಲುಂಗುರದಲ್ಲಿದೆ ಆರೋಗ್ಯದ ರಹಸ್ಯ..! ಏನ್ ಗೊತ್ತಾ..?

ಹೆಣ್ಣು ಮಕ್ಕಳಿಗೆ ಸಾಮಾನ್ಯವಾಗಿ ಮದುವೆಯಾದ ಮೇಲೆ ಸಂಪ್ರದಾಯಿಕವಾಗಿ ಬರೋದು ತಾಳಿ,ಕಾಲುಂಗರ…ಅದರಲ್ಲು ಕಾಲುಂಗುರಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷವಾದ ಸ್ಥಾನಮಾನವಿದೆ. ಮದುವೆಯ ಸಂಕೇತವಾಗಿ ಮಹಿಳೆಯರು ಇದನ್ನು ಕಾಲಿನ ಎರಡನೇ ಬೆರಳಿಗೆ ಧರಿಸುವುದು ವಾಡಿಕೆ.
ಸಂಪ್ರದಾಯ ನಂಬಿಕೆಯ ಹೊರತಾಗಿ ಮಹಿಳೆಯರ ಜೀವನದಲ್ಲಿ ಕಾಲುಂಗುರ ಮಹತ್ವವಾಗಿದೆ. ಅದೇನೆಂದರೇ...ಕಾಲುಗಳ ಎರಡನೇ ಬೆರಳಿನಲ್ಲಿ ಪ್ರೆಶರ್ ಪಾಯಿಂಟ್ ಇರುತ್ತದೆ. ಹಾಗಾಗಿ ಈ ಬೆರಳಿಗೆ ಬೆಳ್ಳಿಯ ಕಾಲುಂಗುರವನ್ನು ಧರಿಸುವುದರಿಂದ , ಮಹಿಳೆಯರ ಋತುಚಕ್ರದಲ್ಲಿ ಏರುಪೇರಾಗುವುದನ್ನು ಕೂಡ ತಡೆಯಬಹುದು. ಅಷ್ಟೆ ಅಲ್ಲದೆ ಗರ್ಭಕೋಶದಲ್ಲಿ ರಕ್ತ ಸಂಚಾರವನ್ನು ಸರಾಗವಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಕಾಲುಂಗುರವನ್ನು ಹಾಕಿಕೊಳ್ಳುವುದರಿಂದ ಕಾಲಿನ ಕೆಲವು ನರಗಳು ಉತ್ತೇಜನಗೊಂಡು ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಸರಿದೂಗಿಸುತ್ತದೆ. ಇದರಿಂದ ಹಲವಾರು ರೀತಿಯ ಸ್ರ್ತೀ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗುತ್ತದೆ.
Comments