ನೀವು ಪೇಟಿಎಂ ಯೂಸ್ ಮಾಡ್ತಿದ್ದೀರಾ..? ಹಾಗಾದ್ರೆ ಇದನ್ನೊಮ್ಮೆ ಓದಿ..!
ನೋಟ್ ಬ್ಯಾನ್ ಆದ ಮೇಲೆ ಸಾಕಷ್ಟು ಬದಲಾವಣೆಗಳು ಆಗಿದ್ದು ನಿಜ.. ಆ ಸಂದರ್ಭದಲ್ಲಿ ಪೇಟಿಎಂ ಹೆಚ್ಚು ಚಾಲ್ತಿಗೆ ಬಂದಿತು. ಭಾರತದ ಅತಿ ದೊಡ್ಡ ಪೇಮೆಂಟ್ ಬ್ಯಾಂಕ್ ಆದ ಪೇಟಿಎಂಗೆ ಭಾರತೀಯ ರಿಸರ್ವ್ ಬ್ಯಾಂಕ್ ಖಡಕ್ ವಾರ್ನಿಂಗ್ ಅನ್ನು ನೀಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಪೇಟಿಎಂಗೆ ನೂತನ ಬಳಕೆದಾರರನ್ನು ಸೇರಿಸಿಕೊಳ್ಳುವ ಪ್ರಕ್ರಿಯೆಯನ್ನು ಈ ಕೂಡಲೇ ನಿಲ್ಲಿಸಬೇಕು ಎಂಬ ಸೂಚನೆ ನೀಡಿದೆ. ಈಗಾಗಲೇ ಜೂನ್ 20ರಿಂದಲೇ ಆರ್ಬಿಐ, ಹೊಸ ಗ್ರಾಹಕರನ್ನು ಪೇಟಿಎಂ ಬಳಕೆಗೆ ನಿರ್ಬಂಧ ಹೇರುವಂತೆ ಆದೇಶವನ್ನು ಹೊರಡಿಸಿದೆ. ಕೆವೈಸಿ ನಂಬರ್ ನಲ್ಲೂ ಕೂಡ ಹಲವಾರು ಬಾರಿ ಪೇಟಿಎಂ ಮೂರರಿಂದ ನಾಲ್ಕು ವ್ಯಕ್ತಿಗಳಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದೆ ಅಂತ ಆರ್’ಬಿಐ ತಿಳಿಸಿದೆ. ಈ ಬಗ್ಗೆ ಆರ್ಬಿಐಗೆ ಪ್ರತಿಕ್ರಿಯೆ ನೀಡಿರುವಂತಹ ಪೇಟಿಎಂ ಆಡಳಿತ ಮಂಡಳಿ, ಸದ್ಯ ಪೇಟಿಎಂ ತನ್ನ ಖಾತೆಗಳಲ್ಲಿ ಬದಲಾವಣೆ ತರೋದಕ್ಕೆ ಸಿದ್ದವಾಗಿದೆ. ಖಾತೆ ತೆರೆಯುವ ಪ್ರಕ್ರಿಯೆ ಮತ್ತು ಈಗಾಗಲೇ ಇರುವ ಖಾತೆಗಳ ನಿರ್ವಹಣೆಯ ಬಗ್ಗೆ ಮತ್ತಷ್ಟು ಸುಧಾರಣಾ ಕ್ರಮಗಳನ್ನ ಕೈಗೊಳ್ಳುವ ಪ್ರಕ್ರಿಯೆ ನಡೆಸುತ್ತಿದೆ ಎಂದು ಪೇಟಿಎಮ್ ಸಂಸ್ಥೆ ಸ್ಪಷ್ಟನೆ ನೀಡಿದೆ.
Comments