ಇಲ್ಲಿದೆ ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್..!ಏನ್ ಗೊತ್ತಾ?

ಬಿಎಂಟಿಸಿಯ ವೋಲ್ವೋ ಬಸ್ ಗಳ ಮೇಲೆ ITBT ಉದ್ಯೋಗಿಗಳು ಹಾಗೂ ಏರ್ ಪೋರ್ಟ್ ನ ಸಾಕಷ್ಟು ಪ್ರಯಾಣಿಕರು ಅವಲಂಬಿತರಾಗಿದ್ದಾರೆ. ಹೀಗಾಗಿ ಬಿಎಂಟಿಸಿ ಮುಂಗಡ ಬುಕ್ಕಿಂಗ್ ಹಾಗೂ ಫಸ್ಟ್ ಅಂಡ್ ಲಾಸ್ಟ್ ಮೈಲ್ ಸಂಪರ್ಕವನ್ನು ಕಲ್ಪಿಸುವ ಆಯಪ್ ವ್ಯವಸ್ಥೆಯನ್ನು ಪ್ರಯಾಣಿಕರಿಗೆ ನೀಡಲು ಮುಂದಾಗಿದೆ.
ಬಸ್'ನಲ್ಲಿ ನಿಂತು ಪ್ರಯಾಣ ಮಾಡುವುದು ಹಿರಿಯರಿಗೆ ಹಾಗೂ ಮಹಿಳೆಯರಿಗೆ ತೊಂದರೆಯಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಯೋಜನೆಗೆ ಬಿಎಂಟಿಸಿ ಮುಂದಾಗಿದೆ. ಇನ್ನೂ ಏರ್ ಪೋರ್ಟ್ ಗೆ ಲಗೇಜ್ ತೆಗೆದುಕೊಂಡು ಹೋಗುವ ಪ್ರಯಾಣಿಕರು ಹೆಚ್ಚಿದ್ದು, ಲಗೇಜ್ ಇಡಲು ಈಗಿರುವ ಜಾಗವನ್ನು ಮತ್ತಷ್ಟು ಹೆಚ್ಚಿಸುವ ಯೋಜನೆಗೆ ಕೂಡ ಮುಂದಾಗಿದೆ.
Comments