ರಾಜ್ಯ ಸರ್ಕಾರದಿಂದ ಉಪನ್ಯಾಸಕರಿಗೆ ಗುಡ್ ನ್ಯೂಸ್..!

ಖಾಲಿ ಇರುವಂತಹ ರಾಜ್ಯದ ಪದವಿ ಕಾಲೇಜುಗಳಲ್ಲಿ ಪ್ರಾಂಶುಪಾಲರು, ಪ್ರಾಧ್ಯಾಪಕರ ,ಉಪನ್ಯಾಸಕರು ಹುದ್ದೆ ಸೇರಿದಂತೆ 5000 ಬೋಧಕ ಸಿಬ್ಬಂದಿಗಳನ್ನು ನೇಮಕ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರಾದ ಜಿ.ಟಿ. ದೇವೇಗೌಡ ತಿಳಿಸಿದರು..
ಪದವಿ ಕಾಲೇಜುಗಳಲ್ಲಿ 5 ಸಾವಿರ ಬೋಧಕ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವ ಸಂಬಂಧ ಶೀಘ್ರವೇ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಅವರು ತಮ್ಮನ್ನು ಭೇಟಿಯಾದ ಮಾಧ್ಯಮದವರಿಗೆ ತಿಳಿಸಿದ್ದಾರೆ. ಇದೇ ಸಮಯದಲ್ಲಿ ನೇಮಕಾತಿಗಳನ್ನು ಕೆಪಿಎಸ್‌ಸಿ ಮೂಲಕ ನಡೆಸಬೇಕೇ, ನೇರವಾಗಿ ಮೆರಿಟ್ ಆಧಾರದ ಮೇಲೆ ನಡೆಸಬೇಕೇ ಎಂಬ ಬಗ್ಗೆ ಇನ್ನು ಯಾವುದೇ ರೀತಿಯ ತೀರ್ಮಾನವನ್ನು ತೆಗೆದುಕೊಂಡಿಲ್ಲ ಹಾಗೂ ನೇಮಕಾತಿ ಪ್ರಕ್ರಿಯೆಗಳು ನಿಧಾನವಾಗದಂತೆ ಎಚ್ಚರ ವಹಿಸುವುದಾಗಿ ತಿಳಿಸಿದರು
Comments