ಗ್ರಾಹಕರಿಗೆ ಗುಡ್ ನ್ಯೂಸ್ : ಇಂದಿನಿಂದ ಈ ವಸ್ತುಗಳ ಬೆಲೆ ಇಳಿಕೆ..!!

27 Jul 2018 2:38 PM | General
22038 Report

ಕೇಂದ್ರ ಸರ್ಕಾರ, ಗೃಹೋಪಯೋಗಿ ಸಲಕರಣೆಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು ಕಡಿತಗೊಳಿಸಿರುವ ಕಾರಣ ಇಂದಿನಿಂದ ಹಲವು ಸಲಕರಣೆಗಳ ಬೆಲೆ ಇಳಿಕೆಯಾಗಲಿದೆ.

ಫ್ರಿಡ್ಜ್, ವಾಷಿಂಗ್ ಮಿಷನ್, ವಾಕ್ಯೂಮ್ ಕ್ಲೀನರ್, 26 ಇಂಚಿನವರೆಗೆ ಟೆಲಿವಿಷನ್ ಸೇರಿದಂತೆ ಹಲವು ಸರಕುಗಳ ಬೆಲೆಯಲ್ಲಿ ಶೇಕಡಾ 7 ರಿಂದ 8 ರಷ್ಟು ಇಳಿಕೆಯಾಗಲಿದೆ ಎಂದು ತಿಳಿದುಬಂದಿದೆ. GST ಮಂಡಳಿಯ ದರ ಪರಿಷ್ಕರಣೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಕಂಪನಿಗಳು ಮುಂದಾಗಿದ್ದು, ಇಂದಿನಿಂದಲೇ ಪರಿಷ್ಕೃತ ದರಗಳಲ್ಲಿ ಈ ವಸ್ತುಗಳು ಗ್ರಾಹಕರಿಗೆ ಲಭ್ಯವಾಗಲಿದೆ.

Edited By

Shruthi G

Reported By

Shruthi G

Comments