ರೈಲು ಸಂಚಾರದ ಮಾಹಿತಿ ಕ್ಷಣ ಮಾತ್ರದಲ್ಲಿ ಕೈ ಸೇರಲು ಏನು ಮಾಡಬೇಕು ಗೊತ್ತಾ..? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..!

ದೇಶದ ಅತ್ಯಂತ ಉದ್ದದ ಸಾರಿಗೆ ಎಂದರೆ ಅದುವೇ ರೈಲು ಮಾರ್ಗ. ಅಲ್ಲದೇ ಅತ್ಯಂತ ಅಗ್ಗದ ಸಾರಿಗೆಯೂ ಹೌದು. ಹಾಗಾಗಿಯೇ ಜನರು ದೂರದ ಪ್ರದೇಶಗಳಿಗೆ ಸಂಚಾರ ಮಾಡಲು ರೈಲುಗಳನ್ನೇ ಹೆಚ್ಚಾಗಿ ಅವಲಂಬಿಸುತ್ತಾರೆ.ಇದೇ ಕಾರಣಕ್ಕೆ ಕೇಂದ್ರ ರೈಲ್ವೇ ವಿಭಾಗ ಸಾಕಷ್ಟು ತಂತ್ರಜ್ಞಾನಗಳನ್ನು ರೈಲ್ವೆ ಇಲಾಖೆಯೊಂದಿಗೆ ಜೋಡಿಸುವ ಪ್ರಯತ್ನ ಮಾಡುತ್ತಿದೆ.
ಈಗಾಗಲೇ ರೈಲು ಟಿಕೆಟ್ ಗಳನ್ನು ಮುಂಗಡವಾಗಿ ಬುಕ್ ಮಾಡಲು ಭಾರತೀಯ ರೈಲ್ವೆ ಐಆರ್ ಸಿಟಿಸಿ ಸೇವೆಯನ್ನು ಆರಂಭಿಸಿದೆ. ಅಲ್ಲದೇ ಈ ವೆಬ್ ಸೈಟ್ ಮೂಲಕ ಪ್ರಯಾಣಿಕರು ಪ್ರಯಾಣದ ವೇಳೆ ತಮಗೆ ಬೇಕಾದ ಆಹಾರವನ್ನು ಟಿಕೆಟ್ ಬುಕ್ ಮಾಡುವ ಸಂದರ್ಭದಲ್ಲೇ ಬುಕ್ ಮಾಡಲು ಅವಕಾಶವಿದೆ.ರೈಲ್ವೆ ಇಲಾಖೆಯು ಇತ್ತೀಚೆಗೆ ಹೆಚ್ಚು ಹೆಚ್ಚು ತಂತ್ರಜ್ಞಾನಗಳನ್ನು ಬಳಕೆ ಮಾಡುವ ಮೂಲಕ ರೈಲು ಪ್ರಯಾಣಿಕರಿಗೆ ಸಾಕಷ್ಟು ಅನುಕೂಲ ಒದಗಿಸುತ್ತಿದೆ. ಅವುಗಳಲ್ಲಿ ವಾಟ್ಸಾಪ್ ಸೇವೆಯೂ ಒಂದಾಗಿದೆ. ಈ ಸೇವೆಯ ಮೂಲಕ ರೈಲಿನ ಕುರಿತು ಕ್ಷಣ ಕ್ಷಣದ ಮಾಹಿತಿಯನ್ನು ಪಡೆಯಲು ಸಾಧ್ಯವಿದೆ.ನೀವು ಪ್ರಯಾಣಿಸುತ್ತಿರುವ ರೈಲು ಅಥವಾ ಪ್ರಯಾಣ ಮಾಡಲು ಬಯಸುವ ರೈಲಿನ ಬಗ್ಗೆ ಮಾಹಿತಿ ಪಡೆಯುವುದು ಈಗ ಹಿಂದೆಂದಿಗಿಂತಲೂ ಸುಲಭ. ನೀವು ಪ್ರಯಾಣ ಮಾಡಬೇಕಿರುವ ರೈಲಿನ ಸಂಖ್ಯೆಯನ್ನು ನಮೂದಿಸಿ ಮೇಕ್ ಮೈ ಟ್ರಿಪ್ ವಾಟ್ಸಾಪ್ ಸಂಖ್ಯೆ 7349389104 ಗೆ ಕಳುಹಿಸಿದರೆ ಸಾಕು ಕ್ಷಣ ಮಾತ್ರದಲ್ಲಿ ರೈಲಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನೀಡುತ್ತದೆ.
ರೈಲಿನ ನಿಜವಾದ ಸಮಯವನ್ನು ತಿಳಿಸುವ ವ್ಯವಸ್ಥೆಯನ್ನು ಹರಿಯಾಣದ ಗುರುಗ್ರಾಮ ಮೂಲದ ಮೇಕ್ ಮೈ ಟ್ರಿಪ್ ಸಂಸ್ಥೆ ಐಆರ್ ಸಿಟಿಸಿ ಸಂಸ್ಥೆಯೊಂದಿಗೆ ಕೈ ಜೋಡಿಸಿ ತಯಾರು ಮಾಡಿದೆ.ಮೇಕ್ ಮೈ ಟ್ರಿಪ್ ಕಳುಹಿಸುವ ಸಂದೇಶದ್ಲಲಿ ರೈಲಿನ ಸಂಪೂರ್ಣ ಮಾಹಿತಿ ಅಂದರೆ, ರೈಲಿನ ಹೆಸರು, ಸಂಖ್ಯೆ, ತಡವಾಗಿ ಚಲಿಸುತ್ತಿದ್ದರೆ ಎಷ್ಟು ನಿಮಿಷ ತಡವಾಗಿ ನಿಲ್ದಾಣವನ್ನು ತಲುಪಲಿದೆ?, ಹಿಂದಿನ ನಿಲ್ದಾಣದಿಂದ ಹೊರಟ ಸಮಯ, ಮುಂದಿನ ನಿಲ್ದಾಣಕ್ಕೆ ಎಷ್ಟು ಸಮಯಕ್ಕೆ ಬಂದು ತಲುಪಲಿದೆ, ರೈಲಿನ ಮಾಹಿತಿ ಕಡೆಯ ಬಾರಿಗೆ ಯಾವಾಗ ಅಪ್ ಡೇಟ್ ಆಗಿದೆ ಎಂಬ ಮಾಹಿತಿಯನ್ನೂ ತೋರಿಸುತ್ತದೆ.ಈ ಮೊದಲು ಪ್ರಯಾಣಿಕರು ರೈಲು ಸಂಚಾರದ ಮಾಹಿತಿ ಪಡೆಯಲು 139 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬೇಕಿತ್ತು. ಆದರೆ ಈಗ ಆಪ್ ಗಳ ಮೂಲಕವೂ ಮಾಹಿತಿಯನ್ನು ಕ್ಷಣ ಮಾತ್ರದಲ್ಲಿ ಪಡೆಯಲು ಸಾಧ್ಯವಿದೆ.
Comments