ರಾಜ್ಯ ಸರ್ಕಾರದಿಂದ ಇವರಿಗೆ ಸಿಗಲಿದೆ ಭಾರೀ ಮೊತ್ತದ ಭರ್ಜರಿ ಬಂಪರ್ ಗಿಪ್ಟ್..! ಎಷ್ಟು ಅಂತ ಕೇಳುದ್ರೆ ಶಾಕ್ ಆಗ್ತೀರಾ..?

ರಾಜ್ಯ ಸರ್ಕಾರವು ನಾನಾ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಕರ್ನಾಟಕದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರವು 5 ಕೋಟಿ ರೂ. ಬಹುಮಾನ ನೀಡುವುದಾಗಿ ಉಪಮುಖ್ಯಮಂತ್ರಿಯಾದ ಡಾ.ಜಿ. ಪರಮೇಶ್ವರ್ ಅವರು ಘೋಷಣೆ ಮಾಡಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆದ 21 ನೇ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬ್ಯಾಡ್ಮಿಂಟನ್ ಮಿಶ್ರ ಡಬಲ್ಸ್ ನಲ್ಲಿ ಚಿನ್ನ ಮತ್ತು ಮಹಿಳಾ ಡಬಲ್ಸ್'ನಲ್ಲಿ ಕಂಚು ಗೆದ್ದಿದ್ದ ಅಶ್ವಿನಿ ಪೊನ್ನಪ್ಪ ಅವರಿಗೆ ರಾಜ್ಯ ಸರ್ಕಾರದಿಂದ 33 ಲಕ್ಷ ರೂ.ಚೆಕ್ ವಿತರಿಸಿದ ಬಳಿಕ ಡಿಸಿಎಂ ಪರಮೇಶ್ವರ್ ಈ ವಿಷಯವನ್ನು ತಿಳಿಸಿದ್ದಾರೆ. ಅಶ್ವಿನಿ ಪೊನ್ನಪ್ಪ ಅವರು ರಾಜ್ಯದ ಹಾಗೂ ರಾಷ್ಟ್ರದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ರಾಜ್ಯ ಸರ್ಕಾರ ಕ್ರೀಡೆಗೆ ಪ್ರೋತ್ಸಾಹ ನೀಡಲು ನಿರ್ಧಾರ ಮಾಡಿದ್ದು, ಒಲಿಂಪಿಕ್ಸ್ ನಲ್ಲಿ ಚಿನ್ನ ಗೆಲ್ಲುವ ಕ್ರೀಡಾಪಟುಗಳಿಗೆ 5 ಕೋಟಿ ರೂ. ಹಾಗೂ ಬೆಳ್ಳಿ ವಿಜೇತರಿಗೆ 3 ಕೋಟಿ, ಕಂಚು ವಿಜೇತರಿಗೆ 2 ಕೋಟಿ ರೂ. ಬಹುಮಾನ ನೀಡಲು ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿಯಾದ ಡಾ.ಜಿ. ಪರಮೇಶ್ವರ್ ತಿಳಿಸಿದರು.
Comments