ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮನಾದ ಯೋಧನ ಮಗ ಹಿತೇಶ್ಗೆ ಒಂದು ಸಲಾಂ…!

ಒಬ್ಬ ಯೋಧನ ಮಗ ತನ್ನ ತಂದೆಯಂತೆ ಒಬ್ಬ ಮಹಾನ್ ಯೋಧನಾಗ ಬಯಸುತ್ತಾನೆ, ಆದರೆ ಎಷ್ಟು ಜನ ಆ ಕೆಲಸವನ್ನು ಮಾಡುತ್ತಾರೆ. ಆದರೆ ಕಾರ್ಗಿಲ್ ಯುದ್ಧದಲ್ಲಿ ಸಾವನ್ನಪ್ಪಿದ ಬಚ್ಚನ್ ಸಿಂಗ್ ಲ್ಯಾನ್ಸ್ ನಾಯಕ್ ಅವರ ಮಗ ಇಂದು ಭಾರತೀಯ ಸೈನ್ಯವನ್ನು ಸೇರುವುದರ ಮೂಲಕ ತಮ್ಮ ತಂದೆಯಂತೆ ದೇಶ ಸೇವೆಗೆ ತನ್ನ ಜೀವವನ್ನು ಮುಡಿಪಾಗಿಟ್ಟಿದ್ದಾನೆ.
ಕಾರ್ಗಿಲ್ ಯುದ್ಧದಲ್ಲಿ ತಮ್ಮ ತಂದೆ ಸಾಯುವಾಗ ಹಿತೇಶ್ ಕುಮಾರ್ಗೆ ಕೇವಲ ಆರು ವರ್ಷ ಮಾತ್ರ, ರಜಪೂತ್ ರೈಫಲ್ಸ್‌ನ 2ನೇ ಬೆಟಾಲಿಯನ್ನಲ್ಲಿ ಬಚ್ಚನ್ ಸಿಂಗ್ ಲ್ಯಾನ್ಸ್ ನಾಯ್ಕ್ ಆಗಿದ್ದರು. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಅಂದರೆ ಜೂನ್ 12, 1999ರ ರಾತ್ರಿ ಟೊಲೊಲಿಂಗ್ ನಲ್ಲಿ ಪಾಕಿಸ್ತಾನ ಸೈನಿಕರ ಗುಂಡೇಟಿಗೆ ಹುತಾತ್ಮರಾದ ಲ್ಯಾನ್ಸ್ ನಾಯಕ್ ಬಚನ್ ಸಿಂಗ್ ಅವರ ಪುತ್ರ ಹಿತೇಶ್ ಕುಮಾರ್, ತಮ್ಮ ತಂದೆ ಸೇವೆ ಸಲ್ಲಿಸಿದ ರಜಪೂತ್ ರೈಫಲ್ಸ್‌ನ 2ನೇ ಬೆಟಾಲಿಯನ್ ಅನ್ನೇ ಸೇರಿದ್ದಾರೆ.ಇನ್ನು ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ವೀರಮರಣವನ್ನಪ್ಪಿದ ಬಚನ್ ಸಿಂಗ್ ಸ್ಮರಣಾರ್ಥ ಮುಜಾಫರ್‌ನಗರದಲ್ಲಿ ಸಿವಿಲ್ ಲೈನ್ ಪ್ರದೆಶಕ್ಕೆ ಅವರ ಹೆಸರನ್ನೇ ಇಡಲಾಗಿದೆ.ಈ ಘಟನೆಯಾಗಿ 19 ವರ್ಷಗಳ ಬಳಿಕ ಪುತ್ರ ಹಿತೇಶ್ ಡೆಹ್ರಾಡೂನ್ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಪಾಸ್ ಔಟ್ ಆಗಿ ಭಾರತೀಯ ಸೇನೆಗೆ ಲೆಫ್ಟಿನೆಂಟ್ ಆಗಿ ಸೇವೆ ಸಲ್ಲಿಸಲು ಸಜ್ಜಾಗಿದ್ದಾರೆ. ಅಲ್ಲದೇ ತಮ್ಮ ತಂದೆಯ ಕನಸು ಕೂಡ ನನಸಾಗಿದ್ದು, ದೇಶಕ್ಕೆ ಅತ್ಯಂತ ಪ್ರಮಾಣಿಕವಾಗಿ ತಮ್ಮ ಸೇವೆ ಸಲ್ಲಿಸುವುದಾಗಿ ಹಿತೇಶ್ ಹೇಳಿದ್ದಾರೆ. ಭಾರತ ಸೇನೆಗೆ ಸೇರಿ ತಮ್ಮ ತಂದೆಯಂತೆಯೇ ನಾಡಿನ ರಕ್ಷಣೆಗೆ ಹೊರಟು ನಿಂತಿರುವ ನಮ್ಮ ಸೈನಿಕ ಹಿತೇಶ್ ಅವರಿಗೆ ನಮ್ಮದೊಂದು ಸಲಾಂ, ಭಾರದಲ್ಲಿ ಈ ತಂದೆ ಮಗನ ಹೆಸರು ಇನ್ನು ಎತ್ತರಕ್ಕೆ ತಲುಪಲಿ ಎಂದು ಆಶಿಸೋಣ ಜೈ ಹಿಂದ್….
Comments