ಚಂದ್ರಗ್ರಹಣ ಹಿನ್ನೆಲೆ: ಈ ದೇವಾಲಯಗಳಲ್ಲಿ ದೇವರ ದರ್ಶನ ಇಲ್ಲ..?

26 Jul 2018 11:17 AM | General
379 Report

ಶುಕ್ರವಾರ ಖಗ್ರಾಸ ಚಂದ್ರಗ್ರಹಣ ಇರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಪೂಜೆ, ದರ್ಶನಗಳ ಸಮಯದಲ್ಲಿ ಬದಲಾವಣೆಯನ್ನು ಮಾಡಲಾಗುತ್ತದೆ ಎಂದು ದೇವಸ್ಥಾನಗಳ ಆಡಳಿತ ಮಂಡಳಿಗಳು ಮಾಹಿತಿಯನ್ನು ತಿಳಿಸಿವೆ.

ಮಂತ್ರಾಲಯದಲ್ಲಿ ಗ್ರಹಣದ 7, 8 ಗಂಟೆಗಳ ಮೊದಲೆ ಮಠದ ಪೂಜೆ ಸ್ಥಗಿತಗೊಳ್ಳಲಿದ್ದು, ಗ್ರಹಣ ದೋಷ ರಾಶಿಗಳ ಹೋಮ ಹವನಗಳನ್ನು ನೆರವೇರಿಸಲಾಗುವುದು ಎಂದು ತಿಳಿಸಿದ್ದಾರೆ. ಕುಕ್ಕೆಸುಬ್ರಹ್ಮಣ್ಯದಲ್ಲಿ ರಾತ್ರಿ 7 ರ ಬಳಿಕ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಸಂಜೆ ಆಶ್ಲೇಷ ಬಲಿ ಕೂಡ ನೆರವೇರುವುದಿಲ್ಲ. ರಾತ್ರಿ ಭಕ್ತರಿಗೆ ಭೋಜನ ವ್ಯವಸ್ಥೆ ಇರುವುದಿಲ್ಲ. ಕೊಲ್ಲೂರು ದೇವಸ್ಥಾನದಲ್ಲಿ ಭಕ್ತರಿಗೆ ರಾತ್ರಿ ಊಟ ಇಲ್ಲ. ಉಡುಪಿ ಶ್ರೀಕೃಷ್ಣಮಠದಲ್ಲಿಯೂ ಕೂಡ ಸಂಜೆ 6 ರೊಳಗೆ ಪೂಜೆ ಮುಕ್ತಾಯವಾಗಲಿದೆ ಎಂದು ಆಡಳಿತ ಮಂಡಳಿಗಳು ತಿಳಿಸಿವೆ

Edited By

Manjula M

Reported By

Manjula M

Comments