ಪ್ರತಿಯೊಬ್ಬ ಮನುಷ್ಯನೂ ತಿಳಿದುಕೊಳ್ಳಲೇಬೇಕಾದ ವಿಷಯ..! ನೀವು ಒಂದ್ಸಲ ಓದಿ..
ನಮ್ಮ ದೇಹವೇ ಒಂದು ಬ್ರಹ್ಮಾಂಡ, ನಮಗೆ ನಮ್ಮ ದೇಹದಲ್ಲಿನ ಕೆಲವು ಅಂಗಗಳು ಮತ್ತು ಕೆಲಸಗಳ ಬಗ್ಗೆ ಮಾತ್ರ ಗೊತ್ತು ಆದರೆ ನಮ್ಮದೇಹದಲ್ಲಾಗುವ ಅಚ್ಚರಿಯ ಬೆಳವಣಿಗೆಗಳ ಬಗ್ಗೆ ನಮಗೇ ಗೊತ್ತಿಲ್ಲ. ನಮ್ಮ ದೇಹಕ್ಕೆ ಯಾವುದು ಸರಿ? ಚಳಿ ಇದ್ರೆ ಒಳ್ಳೆದಾ? ಬಿಸಿಲಾದ್ರೆ ಒಳ್ಳೆದಾ? ಯಾವುದು ಶೀತ? ಯಾವುದು ಉಷ್ಣ, ಏನು ತಿಂದ್ರೆ ಒಳ್ಳೇದು ಏನು ಮಾಡಿದ್ರೆ ಒಳ್ಳೇದು… ಅಂತ ನಮಗೇ ಗೊತ್ತೇ ಇದೆ.
ಆದರೆ ನಮ್ಮ ದೇಹದ ಬಗ್ಗೆ ತುಂಬಾನೇ ಇದೆ ಎಂಬುದು ಈ ಅಂಶಗಳನ್ನು ಓದಿದರೆ ಗೊತ್ತಾಗುತ್ತದೆ. ನಿಮ್ಮ ದೇಹದ ಬಗ್ಗೆ ನೀವು ಇಲ್ಲಿಯವರೆವಿಗೂ ತಿಳಿದು ಕೊಳ್ಳದೇ ಇರುವ ವಿಷಯಗಳನ್ನ ಓದುತ್ತಾ ಇದ್ದರೆ ನಿಮಗೇ ಅಚ್ಚರಿಯಾಗುವುದರಲ್ಲಿ ಅನುಮಾನವಿಲ್ಲ.
- ಮೆದುಳಿಗೆ ತಲುಪೋ ವಿಚಾರಗಳು ಗಂಟೆಗೆ 400 ಕಿ.ಮಿ ವೇಗದಲ್ಲಿ ಚಲಿಸುತ್ತೆ, ಅಂದರೆ ಬುಲೇಟ್ ಟ್ರೈನ್ ಸ್ಪೀಡ್ಗಿಂತ ವೇಗವಾಗಿ.
- ಒಂದ್ ದಿನಕ್ಕೆ ನಮ್ಮ ರಕ್ತ ಇಡೀ ದೇಹ ಸುತ್ತು ಹಾಕಿ 19,312 ಕಿ.ಮೀ ಚಲಿಸುತ್ತೆ.
- ನಮ್ಮ ದೇಹದ ನರಗಳನ್ನೆಲ್ಲ ಒಟ್ಟುಗೂಡಿಸಿ ನೋಡಿದ್ರೆ ಅದರ ಉದ್ದ 75 ಕಿ.ಮಿ ಆಗುತ್ತೆ.
- ನಮ್ಮ ಕಣ್ಣುಗಳು ಸುಮಾರು 1 ಕೋಟಿ ಬಣ್ಣಗಳನ್ನ ಗುರುತಿಸುತ್ತವೆ, ಆದ್ರೆ ನಮ್ಮ ಮೆದುಳಿಗೆ ಅವನ್ನೆಲ್ಲಾ ನೆನಪಿನಲ್ಲಿಟ್ಟುಕೊಳ್ಳೋ ಶಕ್ತಿ ಇಲ್ಲ.
- ಮನುಷ್ಯ ಬದುಕಿರೋ ವರೆಗೂ ಅವನ ಕಿವಿ ಬೆಳೀತಾನೆ ಇರುತ್ತೆ – ವರ್ಷಕ್ಕೆ 0.25 mm ನಷ್ಟು
- ನಮ್ಮ ಹೃದಯ ವರ್ಷಕ್ಕೆ 35 ಕೋಟಿ ಸಲ ಬಡಿಯುತ್ತೆ.
- ಪ್ರತಿದಿನ ನಮ್ಮ ದೇಹ ಸುಮಾರು 1 ಕೋಟಿ ಚರ್ಮ ಕಣಗಳನ್ನ ಕಳೆದುಕೊಳ್ಳುತ್ತೆ
- ಹೆಣ್ಣು ಮಕ್ಕಳ ನಾಲಿಗೇಲಿ ಗಂಡು ಮಕ್ಕಳಿಗಿಂತ ಜಾಸ್ತಿ ರುಚಿಯ ಕಣಗಳು ಇರುತ್ತವೆ.
- ಒಬ್ಬ ಮನುಷ್ಯ ತನ್ನ ಜೀವಿತಾವದಿಯಲ್ಲಿ ಕೇವಲ ಕಣ್ಣು ಮಿಟಿಕಿಸೋದ್ರಲ್ಲೇ 5 ವರ್ಷ ಕಳೀತಾನೆ.
- ಮನುಷ್ಯನಿಗೆ ನೀರಿನಿಂದ ಸಿಗುವಷ್ಟು ಶಕ್ತಿ ಆಹಾರ ಪದಾರ್ಥಗಳಿಂದ ಸಿಗಲ್ಲ.
- ದೇಹದಲ್ಲಿ ಅತ್ಯಂತ ಶಕ್ತಿಯುಳ್ಳ ಸ್ನಾಯು ಅಂದ್ರೆ ನಾಲಿಗೆ.
- ಉಗುರು ಮತ್ತು ಕೂದಲು ಎರಡೂ ಒಂದೇ ವಸ್ತುವಿನಿಂದ ಕೂಡಿರುತ್ತವೆ.
Comments