ನಿಮ್ಮ ಎಟಿಎಮ್ ನಂಬರ್ ಮರೆತೊಗಿದ್ಯಾ..? ಹಾಗಿದ್ರೆ ಚಿಂತೆ ಮಾಡ್ಬೇಡಿ ಇದನ್ನೊಮ್ಮೆ ಓದಿ

ಡಿಜಿಟಲ್ ಇಂಡಿಯಾ ಮತ್ತು ನೋಟು ಅಮಾನ್ಯಿಕರಣದ ನಂತರ ಎಲ್ಲಾ ವಹಿವಾಟುಗಳೂ ಕೂಡ ಕ್ಯಾಶ್ ಲೆಸ್ ಆಗಿದ್ದು ಒಬ್ಬ ವ್ಯಕ್ತಿ ಸುಮಾರು ನಾಲ್ಕಕ್ಕಿಂತ ಹೆಚ್ಚು ಎಟಿಎಂ ಕಾರ್ಡು್ಗಳಿನ್ನಿಟ್ಟುಕೊಂಡಿರುತ್ತಾನೆ ಆದರೆ ಆ ನಾಲ್ಕು ಎಟಿಎಂ ಪಿನ್ ನೆನಪಿನಲ್ಲಿಡುವುದು ಕೊಂಚ ಕಷ್ಟದ ಕೆಲಸ.
ಮತ್ತೆ ಕೆಲವರ ಪಿನ್ ಅನ್ನು ಮನೆ ಮಂದಿಯಲ್ಲ ನೆನಪಿಟ್ಟು ಕೊಂಡು ಹಣ ಡ್ರಾ ಮಾಡಿಕೊಳ್ಳುತ್ತಾರೆ ಅಂತವರಿಗೆ ಗೊತ್ತಾಗದಂತೆ ನಿಮ್ಮ ಪಿನ್ ಅನ್ನು ಬದಲಾಯಸಿಕೊಳ್ಳಲು ಈ ಕೆಳಗಿನಂತೆ ಮಾಡಿದರೆ ನಿಮಗೆ ನಿಮ್ಮ ಪಿನ್ ಕೆಲವೇ ನಿಮಿಷಗಳಲ್ಲಿ ಸಿಗುತ್ತದೆ.
- ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್, ನಿಮ್ಮ ಅಕೌಂಟ್ಗೆ ಲಿಂಕ್ ಮಾಡಿದ ಮೊಬೈಲ್, ಎಟಿಎಂ ಕಾರ್ಡ್ಅನ್ನು ತೆಗೆದುಕೊಂಡು ಎಟಿಎಂ ಸೆಂಟರ್ ಗೆ ಹೋಗಿ
- ತಮ್ಮ ಕಾರ್ಡ್ ಅನ್ನು ಎಟಿಎಂಗೆ ಹಾಕಿ
- ಬ್ಯಾಂಕಿಂಗ್ ಎಂಬ ಆಪ್ಷನ್ ಅನ್ನು ಆಯ್ಕೆ ಮಾಡಿ
- ಅಲ್ಲಿ ಪಿನ್ ಜನರೇಟ್ ಅಥವಾ ಪಿನ್ ರೀ ಸೆಟ್ ಎಂಬ ಆಪ್ಷನ್ ಅನ್ನು ಆಯ್ಕೆ ಮಾಡಿಕೊಳ್ಳಿ
- ನಿಮ್ಮ ಅಕೌಂಟ್ ನಂಬರ್ ಅನ್ನು ನಮೋದಿಸಿ (ಎಂಟರ್ ಮಾಡಿ).
- ನಿಮ್ಮ ನಂಬರ್ ಎಂಟರ್ ಮಾಡಿ
- ಆಗ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ಗೆ ಒಟಿಪಿ (ಒನ್ ಟೈಮ್ ಪಾಸ್ ವರ್ಡ್) ಬರುತ್ತದೆ
- ಒಟಿಪಿ ಎಂಟರ್ ಮಾಡಿ ಆಗ ನಿಮ್ಮ ಪಿನ್ ಬದಲಾಯಿಸಿ.
- ನಿಮ್ಮ ಹಳೆಯ ಪಿನ್ ಡಿಲಿಟ್ ಆಗಿ ಹೊಸ ಪಿನ್ ಅಪ್ಡೇಟ್ ಆಗುತ್ತದೆ.
Comments