ಮಧುಮೇಹ ಕಾಯಿಲೆಗೆ ರಾಮಬಾಣದಂತಿರುವ ಈ ಸೊಪ್ಪು ಯಾವುದು ಗೊತ್ತಾ..!?

ಮೆಂತ್ಯೆ ಸೊಪ್ಪು ಔಷಧೀಯ ಸಸ್ಯವೂ ಹೌದು. ಔಷಧ ಗುಣಗಳ ಭಂಡಾರವಾದುದರಿಂದ ಪೂರ್ವಜರು ಅಡುಗೆಗಳಲ್ಲಿ ಮೆಂತ್ಯೆಯನ್ನು ಹೆಚ್ಚಾಗಿ ಬಳಸುತ್ತಿದ್ದರು. ಇದು ಮಧುಮೇಹ (ಸಕ್ಕರೆ ಕಾಯಿಲೆ) ನಿಯಂತ್ರಣಕ್ಕೆ ರಾಮಬಾಣವಿದ್ದಂತೆ. ಮೆಂತ್ಯೆ ಸೊಪ್ಪಿನ ಸೇವನೆ ರಕ್ತದಲ್ಲಿನ ಕೊಬ್ಬಿನ ಅಂಶವನ್ನು ಕಡಿಮೆ ಮಾಡುವುದು.
ದೇಹದ ತೂಕ ಕಡಿಮೆ ಮಾಡಲು ಬಯಸುವರು ಇದರ ಬಳಕೆ ಹೆಚ್ಚಿಸಹುದು. ಇದರ ಬಳಕೆಯಿಂದ ಮುಟ್ಟಿನ ತೊಂದರೆಗಳು ನಿವಾರಣೆಯಾಗುವುದು. ಕೂದಲು ಉದುರುವಿಕೆಯನ್ನು ಕಡಿಮೆ ಮಾಡುವುದಲ್ಲದೇ ಕೂದಲನ್ನು ಕಾಂತಿಯುತಗೊಳಿಸುವುದು. ಮೆಂತ್ಯೆ ಸೊಪ್ಪುನ್ನು ಕ್ರಮಬದ್ಧವಾಗಿ ಅಡುಗೆಗಳಲ್ಲಿ ಬಳಸುವುದರಿಂದ ಶ್ವಾಸಕೋಶ, ಹೃದಯ, ಮಿದುಳಿನ ಕಾಯಿಲೆಗಳು ವಾಸಿಯಾಗುವುದು. ಅಲ್ಲದೇ ಮೆಂತ್ಯೆ ಸೊಪ್ಪನ್ನು ವಡೆ, ಪಕೋಡ, ಬಾತ್, ತಂಬುಳಿ, ಪಲ್ಯಗಳಲ್ಲಿ ಬಳಕೆ ಮಾಡುವುದರಿಂದ ಮೈ, ಕೈ, ಕಾಲು, ಬೆನ್ನು, ಸೊಂಟದ ನೋವು ನಿವಾರಣೆಯಾಗುತ್ತದೆ. ಬಹುಪಯೋಗಿ ಮೆಂತ್ಯೆ ಸೊಪ್ಪು ಬಳಸಿ ತಯಾರಿಸಲಾದ ರುಚಿಕರ ಅಡುಗೆ ರೆಸಿಪಿ ಇಲ್ಲಿದೆ ನೋಡಿ. ಮೆಂತ್ಯ ಸೊಪ್ಪಿನಿಂದ ಈ ಅಡುಗೆ ಮಾಡಿ ನೀವೂ ಸವಿಯಿರಿ.ಬೇಯಿಸಿದ 2 ಆಲೂಗಡ್ಡೆ, ಹೆಚ್ಚಿದ ಮೆಂತ್ಯೆ ಸೊಪ್ಪು, ದನಿಯಾ ಪುಡಿ, ಹೆಚ್ಚಿದ 2 ಈರುಳ್ಳಿ, ಅರಿಶಿನ ಪುಡಿ, ಗರಂ ಮಸಾಲ, ಜೀರಿಗೆ ಪುಡಿ, ಇಂಗು, ಎಣ್ಣೆ, ಉಪ್ಪು, ಟೊಮೆಟೊ, ಖಾರದ ಪುಡಿ, ಬೆಳ್ಳುಳ್ಳಿ, ಜೀರಿಗೆ, ಸಕ್ಕರೆ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು.
ಮಾಡುವ ವಿಧಾನ:
- ಪಾತ್ರೆಗೆ ಎಣ್ಣೆ ಹಾಕಿ ಜೀರಿಗೆ, ಇಂಗು, ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ.
- ಬೆಳ್ಳುಳ್ಳಿ ಕೆಂಪಗಾದ ಮೇಲೆ ಹೆಚ್ಚಿದ ಈರುಳ್ಳಿ, ಟೊಮೆಟೊ, ಸ್ವಲ್ಪ ಸಕ್ಕರೆ, ಹಸಿಮೆಣಸಿನಕಾಯಿ ಹಾಕಿ ಕೈಯ್ಯಾಡಿಸಿ.
- ಮುಚ್ಚಳ ಮುಚ್ಚಿ 5 ನಿಮಿಷಗಳ ಕಾಲ ಬೇಯಿಸಿ.
- ನಂತರ ಮುಚ್ಚಳ ತೆಗೆದು ಮೆಂತ್ಯೆ ಸೊಪ್ಪು ಹಾಕಿ ಕೈಯ್ಯಾಡಿಸಿ.
- ಸ್ವಲ್ಪ ನೀರು ಹಾಕಿ ಮುಗುಚಿ ಮತ್ತೆ ಮುಚ್ಚಳ ಮುಚ್ಚಿ 5-10 ನಿಮಿಷಗಳ ಕಾಲ ಬೇಯಿಸಿ.
- ಮುಚ್ಚಳ ತೆಗೆದು ಬೇಯಿಸಿ ಕಟ್ ಮಾಡಿದ ಆಲೂಗಡ್ಡೆ, ಅರಿಶಿನ, ಗರಂಮಸಾಲ, ದನಿಯಾ ಪುಡಿ, ಜೀರಿಗೆ ಪುಡಿ, ಖಾರದ ಪುಡಿ, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ಕದಡಿ.
2 ನಿಮಿಷಗಳ ಕಾಲ ಬೇಯಿಸಿದರೆ ಆರೋಗ್ಯಕರ ಮೆಂತ್ಯೆ ಸೊಪ್ಪಿನ ಪಲ್ಯ ತಿನ್ನಲು ರೆಡಿ. ಇದನ್ನು ಚಪಾತಿ, ದೋಸೆ,ಅನ್ನದ ಜೊತೆಯೂ ತಿನ್ನಬಹುದು.
Comments