ರಾಜ್ಯದ ಜನತೆಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ : 32 ಲಕ್ಷ ಕುಟುಂಬಗಳಿಗೆ ದೊರೆಯಲಿದೆ ಈ ಯೋಜನೆ..!

ಬಿಪಿಎಲ್, ಎಲ್’ಪಿಎಲ್ ಕಾರ್ಡುದಾರರಿಗೆ ಒಲೆ ವಿತರಿಸುವ 'ಮುಖ್ಯಮಂತ್ರಿ ಅನಿಲ ಭಾಗ್ಯ' ಯೋಜನೆಯು ಜುಲೈ 15 ರಿಂದ ಜಾರಿಗೆ ಬಂದಿದೆ ಅಂತ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಮೀರ್ ಅಹಮದ್ ಅವರು ತಿಳಿಸಿದ್ದಾರೆ.
ಅವರು ಇಂದು ಅನಿಲ ಭಾಗ್ಯ ಯೋಜನೆ ಕುರಿತ ಸಭೆ ಮುಕ್ತಾಯವಾದ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಸಚಿವ ಜಮೀರ್ ಅಹಮದ್ ಅನಿಲ ಭಾಗ್ಯ ಯೋಜನೆಗೆ ಈಗಾಗಲೇ 32 ಲಕ್ಷ ಅರ್ಜಿಗಳು ಬಂದಿದೆ, ಮೂರು ಹಂತದಲ್ಲಿ ಯೋಜನೆ ಅನುಷ್ಠಾನ ಮಾಡಲು ಸಭೆಯಲ್ಲಿ ನಿರ್ಧಾರ ಮಾಡಿದ್ದೇವೆ ಮೊದಲ ಹಂತದಲ್ಲಿ 10 ಲಕ್ಷ ಸ್ಟೌವ್, ಗ್ಯಾಸ್ ಕನೆಕ್ಷನ್ ನೀಡಲಾಗುತ್ತದೆ. ಬಳಿಕ ಎರಡು ಹಂತದಲ್ಲಿ ಉಳಿದವರಿಗೆ ಗ್ಯಾಸ್ ಸ್ಟೌವ್, ಗ್ಯಾಸ್ ಸಂಪರ್ಕ ನೀಡುತ್ತೇವೆ ಎಂದು ಹೇಳಿದರು.
Comments