ಫ್ಯಾಷನ್ ಜಗತ್ತಿನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿವೆ ಈ ಆಭರಣಗಳು..!

24 Jul 2018 3:54 PM | General
389 Report

ದಿನದಿಂದ ದಿನಕ್ಕೆ ನವನಾವೀನ್ಯತೆಯ ರೂಪ ಪಡೆಯುವ ಫ್ಯಾಷನ್ ಲೋಕಕ್ಕೆ ಹೊಸ ಹೊಸ ವಿನ್ಯಾಸದ ಆಭರಣಗಳು ಲಗ್ಗೆ ಇಡುತ್ತಿರುತ್ತವೆ. ಪುರಾತನ ಶೈಲಿಯ ಆಭರಣಗಳು ಹೊಚ್ಚ ಹೊಸ ರೂಪ ಪಡೆದುಕೊಂಡು ಹೆಂಗಳೆಯರ ಮನ ಸೆಳೆಯುತ್ತವೆ. ಮೊದಲು ಬುಡಕಟ್ಟು ಜನಾಂಗಗಳಲ್ಲಿ ಮಾತ್ರ ಕಾಣುತ್ತಿದ್ದ ಕಲ್ಲಿನ ಆಭರಣಗಳು ಸಿನಿಮಾಗಳಲ್ಲಿ ನಟಿಯರು ಹಾಕಿಕೊಂಡು ಮತ್ತಷ್ಟು ಹೊಸ ರೂಪ ನೀಡಿದರು. ಇದರಿಂದ ಜನಸಾಮಾನ್ಯರನ್ನೂ ಸೆಳೆಯುವಂತಾಯಿತು.

ಆದರೆ ಈಗ ಈ ನೈಸರ್ಗಿಕವಾದ ಕಲ್ಲುಗಳನ್ನು ಬಳಸಿಕೊಂಡು ತಯಾರಿಸಲಾಗುವ ಆಭರಣಗಳು ಎಲ್ಲ ವರ್ಗದವರಿಗೂ ದೊರೆಯುವಂತಾಗಿದೆ. ಅದುವೇ ಬಹು ಬೇಡಿಕೆಯ ಟ್ರೆಂಡ್ ಅನ್ನು ಕ್ರಿಯೇಟ್ ಮಾಡಿಬಿಟ್ಟದೆ. ಈ ಒಡವೆಗಳು ವಿನ್ಯಾಸ, ಬಣ್ಣ, ಶೈಲಿ ಎಲ್ಲದರಲ್ಲೂ ವಿಶಿಷ್ಟತೆ ಮತ್ತು ಹೊಸತನವನ್ನು ತುಂಬಿಕೊಂಡಿದೆ. ಇದೇ ಕಾರಣದಿಂದ ಕಲ್ಲಿನ ಆಭರಣಗಳು ಫ್ಯಾಷನ್ ಜಗತ್ತಿನಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದೆ.ಅಚ್ಚರಿ ಮೂಡಿಸುವ ಸಣ್ಣ ಸಣ್ಣ ವಸ್ತುಗಳನ್ನೇ ಬಳಸಿಕೊಂಡು ಆಭರಣಗಳನ್ನು ವಿನ್ಯಾಸ ಮಾಡಿ, ಫ್ಯಾಷನ್ ಲೋಕಕ್ಕೆ ಮೆರುಗು ತುಂಬಲಾಗುತ್ತಿದೆ. ಅವುಗಳನ್ನು ಈಗಿನ ಯುವತಿಯರ ಇಷ್ಟಕ್ಕೆ ತಕ್ಕಂತೆ ಒಗ್ಗಿಸಿಕೊಂಡು ಹೊಸತೊಂದು ವಿನ್ಯಾಸವನ್ನೇ ಸೃಷ್ಟಿಸಲಾಗುತ್ತಿದೆ.ನುಣ್ಣನೆಯ ಕಲ್ಲುಗಳು, ಸೆಣಬಿನ ದಾರದ ಜೊತೆಗೆ ಅದಕ್ಕೆ ಪೂರಕವಾದ ವಸ್ತುಗಳಾದ ಮಣಿ, ಕಪ್ಪೆ ಚಿಪ್ಪು, ಪುಟ್ಟ ಪುಟ್ಟ ಶಂಖ ಹೀಗೆ ನಾನಾ ರೀತಿಯ ಆಭರಣಗಳನ್ನು ವಿಭಿನ್ನ ರೀತಿಯಲ್ಲಿ ಜೋಡಿಸಲಾಗುತ್ತದೆ. ಈ ರೀತಿ ವಿಭಿನ್ನವಾಗಿ ಜೋಡಿಸುವ ಕಲೆಯೇ ಜನರನ್ನು ಆಕರ್ಷಿಸುತ್ತದೆ.

ಇವುಗಳಲ್ಲಿ ಬ್ರೇಸ್ ಲೆಟ್, ಕಿವಿಯೋಲೆಗಳನ್ನು ತಯಾರಿಸುತ್ತಾರೆ. ಸಾಧಾರಣವಾದ ಕಲ್ಲು ಕೂಡ ಪಾಲಿಶ್ ಪಡೆದು ವಿವಿಧ ಬಣ್ಣ, ಆಕಾರ ತಳೆದು ಅತ್ಯಾಕರ್ಷಕ ಪೆಂಡೆಂಟ್, ನೆಕ್ಲೇಸ್ ಮತ್ತಿತರ ವಿವಿಧ ನಮೂನೆಯ ಸರಗಳಾಗಿ ಮಾರ್ಪಾಟಾಗುತ್ತದೆ. ಆ ಮೂಲಕ ಲಲನೆಯರ ಕತ್ತನ್ನು ಅಲಂಕರಿಸುತ್ತಿವೆ.ಜೀನ್ಸ್, ಕುರ್ತಾ, ಸಲ್ವಾರ್, ಸೀರೆ ಹೀಗೆ ಸಾಂಪ್ರದಾಯಿಕ ಹಾಗೂ ಆಧುನಿಕ ವಸ್ತ್ರಗಳಿಗೂ ಹೊಂದಿಕೊಂಡು ಉತ್ತಮ ಲುಕ್ ನೀಡುತ್ತದೆ. ಅಲ್ಲದೇ, ಉಡುಪಿನ ಮಾದರಿಯಲ್ಲೇ ಇದ್ದು ದೇಹದ ಅಂದವನ್ನು ದುಪ್ಪಟ್ಟು ಮಾಡುತ್ತದೆ.ಸಾಧಾರಣವಾಗಿ ಇವು ಎಲ್ಲಾ ಫ್ಯಾನ್ಸಿ ಸ್ಟೋರ್ ಗಳಲ್ಲಿಯೂ ಲಭ್ಯವಿದೆ. ಬೆಲೆ ಕೂಡ ಕೈ ಗೆಟುಕುವಂತಿರುತ್ತವೆ. ಕಂಡ ತಕ್ಷಣ ತನ್ನತ್ತ ಸೆಳೆಯುವ ಇಂತಹ ಕಲ್ಲಿನ ಆಭರಣಗಳಿಗೆ ಹೆಂಗಳೆಯರು ಹೆಚ್ಚು ಮನ ಸೋಲುತ್ತಾರೆ.

Edited By

Manjula M

Reported By

Manjula M

Comments