ನಿಮ್ಮ ಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳಬೇಕಾ…? ಹಾಗಾದ್ರೆ ಈ ನಂಬರ್’ಗೆ ಮಿಸ್ಡ್ ಕಾಲ್ ಕೊಡಿ..!

ನಿಯಮಗಳ ಪ್ರಕಾರ ಕೆಲಸ ಮಾಡುವಂತಹ ಪ್ರತಿಯೊಬ್ಬ ಕೆಲಸಗಾರನ ಪಿಎಫ್ ಮೊತ್ತವನ್ನು ಇಪಿಎಫ್‌ಒನಲ್ಲಿ ಜಮಾ ಮಾಡಬೇಕಾಗುತ್ತದೆ. ಪ್ರತಿ ತಿಂಗಳು ಕೂಡ ಪಿಎಫ್ ಹೆಸರಿನಲ್ಲಿ ಕಟ್ ಆಗುವಂತಹ ಹಣ ನಮ್ಮ ನಮ್ಮ ಖಾತೆಯಲ್ಲಿ ಭದ್ರವಾಗಿರುತ್ತದೆ. ಕೆಲವರು ನಿವೃತ್ತಿಯ ಬಳಿಕ ಹಣ ಪಡೆದರೆ ಮತ್ತೆ ಕೆಲವರು ಕೆಲಸ ಬಿಟ್ಟ ನಂತರ ಹಣವನ್ನುತೆಗೆದುಕೊಳ್ಳುತ್ತಾರೆ.
ನಮ್ಮ ಪಿಎಫ್ ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದನ್ನು ತಿಳಿಯಲು ಸಾಕಷ್ಟು ಮಾರ್ಗಗಳಿರುತ್ತವೆ. ಅದರಲ್ಲಿ ಮಿಸ್ಡ್ ಕಾಲ್ ಕೂಡ ಒಂದು ಮಾರ್ಗವಾಗಿದೆ. ಇದಕ್ಕಾಗಿ ಇಪಿಎಫ್‌ಒ ನಂಬರ್ ನೀಡಿದೆ. ಇಪಿಎಫ್‌ಒ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪಿಎಫ್ ಚೆಕ್ ಮಾಡುವ ಸೌಲಭ್ಯವನ್ನು ನೀಡಲಾಗಿದೆ. ಇ-ಪಾಸ್ಬುಕ್ ಲಿಂಕ್ ವೆಬ್ಸೈಟ್ ನಲ್ಲಿಯೇ ನಿಮಗೆ ಸಿಗಲಿದೆ. ಯುಎಎನ್ ನಂಬರ್ ಹಾಗೂ ಪಾಸ್ವರ್ಡ್ ಅಲ್ಲಿ ನಮೂದಿಸಬೇಕಾಗುತ್ತದೆ. ಅನಂತರ ಪಾಸ್ ಬುಕ್ ಬಟನ್ ಪ್ರೆಸ್ ಮಾಡಿ. ಅಲ್ಲಿಯೇ ನಿಮಗೆ ನಿಮ್ಮ ಬ್ಯಾಲೆನ್ಸ್ ಮೊತ್ತ ಕಾಣಿಸಲಿದೆ. ಮಿಸ್ಡ್ ಕಾಲ್ ಕೊಡುವ ಮೂಲಕ ನೀವು ಸುಲಭವಾಗಿ ಪಿಎಫ್ ಹಣ ನೋಡಬಹುದು. ಇ.ಪಿ.ಎಫ್.ಒ. 011-22901406 ನಂಬರ್ ನೀಡಿದೆ. ನೋಂದಾಯಿತ ಮೊಬೈಲ್ ನಂಬರ್ ಮೂಲಕ 011-22901406ಗೆ ಮಿಸ್ಡ್ ಕಾಲ್ ನೀಡಿದ್ರೆ ನಿಮ್ಮ ಪಿಎಫ್ ಬ್ಯಾಲೆನ್ಸ್ ನಿಮಗೆ ಕಾಣಿಸಲಿದೆ.
Comments