ಕಪ್ಪು ದಾರವನ್ನ ಕಾಲಿಗೆ ಕಟ್ಟಿಕೊಳ್ಳಬೇಕು ಅಂತಾರೆ ..! ಯಾಕೆ ಗೊತ್ತಾ.?

ಅನೇಕರು ಫ್ಯಾಷನ್ ಗಾಗಿ ಕಟ್ಟಿಕೊಳ್ಳುವ ಈ ಕಪ್ಪು ದಾರವನ್ನ ಕಟ್ಟಿಕೊಳ್ಳೋದ್ಯಾಕೆ ಗೊತ್ತಾ..? ಹಾಗೆ ಇದನ್ನ ಎಲ್ಲಿಗೆ ಕಟ್ಟಿಕೊಳ್ಳಬೇಕು ಗೊತ್ತಾ..? ಯಾವ ಕೆಟ್ಟ ದೃಷ್ಟಿಯೂ ಬೀಳದಂತೆ ತಡೆಯಲು ಕಪ್ಪು ದಾರ ಒಂದೇ ಸಾಕು. ದೃಷ್ಠಿ ತಾಕದಿರಲಿ ಎನ್ನುವ ಕಾರಣಕ್ಕೆ ಈ ಕಪ್ಪು ದಾರವನ್ನ ಬಳಸಲಾಗುತ್ತದೆ. ಸಾಮಾನ್ಯವಾಗಿ ಕೆಲವು ಜನರು ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಂಡಿರುತ್ತಾರೆ.. ಅದು ಏಕೆ? ಕಪ್ಪು ದಾರವನ್ನು ಕಟ್ಟಿಕೊಂಡರೇ ಏನೆಲ್ಲಾ ಉಪಯೋಗಗಳು ಇವೆ ಎಂದು ಇಲ್ಲಿ ತಿಳಿಸಿಕೊಡಲಾಗಿದೆ ನೋಡಿ.
ಮನುಷ್ಯನಿಗೆ ದೃಷ್ಟಿ ಬಿದ್ದರೆ ಯಶಸ್ಸಿನಿಂದ ಪಾತಾಳಕ್ಕೆ ಇಳಿದು ಬಿಡುತ್ತಾನೆ ಎಂಬುದು ಹಿರಿಯರ ನಂಬಿಕೆ. ಅದಕ್ಕಾಗಿ ಕೆಟ್ಟ ದೃಷ್ಟಿ ಗಳು ಬೀಳಬಾರದೆಂದು ಹಲವಾರು ರೀತಿಯ ನಂಬಿಕೆಗಳನ್ನು ರೂಡಿಸಿಕೊಂಡಿದ್ದರು. ಮೆಣಸಿನ ಕಾಯಿಯಲ್ಲಿ ದೃಷ್ಟಿ ತೆಗೆಯುವುದು. ಕುಂಕುಮದ ನೀರು, ಬರಲು, ಇದ್ದಿಲು, ಮೊಟ್ಟೆ ಇತ್ಯಾದಿಗಳಿಂದ ದೃಷ್ಟಿ ತೆಗೆಯುತ್ತಿದ್ದರು. ಆದ್ರೆ ಇದು ಈಗ ಅದೆಷ್ಟೋ ಮಂದಿಗೆ ಗೊತ್ತೇ ಇಲ್ಲ. ಯಾಕಂದ್ರೆ ಆಧುನಿಕ ಜೀವನ ನಡೆಸುತ್ತಿರುವ ನಮ್ಮ ಈ ಜನಕ್ಕೆ ಹಿಂದಿನ ಕಾಲದ್ದೆಲ್ಲಾ ಹೇಗೆ ತಿಳಿಯುತ್ತದೆ ಅಲ್ವಾ..? ಅದಕ್ಕಾಗೆ ಹೇಳ್ತಿರೋದು ಫ್ಯಾಷನ್ ಗಾಗಿ ಕಟ್ಟುತ್ತಿರುವ ಕಪ್ಪು ದಾರದ ಉಪಯೋಗ ಏನು ಅಂತ. ಹಿಂದೆ ಕಪ್ಪು ದಾರ ಕಟ್ಟಿಕೊಳ್ಳುವುದು ಕೂಡ ಅಭ್ಯಾಸವಿತ್ತು. ಕಪ್ಪು ದಾರ ಕಟ್ಟಿಕೊಂಡರೇ ಹಲವಾರು ಉಪಯೋಗಗಳಿವೆ. ಕಪ್ಪು ದಾರವನ್ನು ಕೈಗೆ, ಕತ್ತಿಗೆ ಅಥವಾ ಕಾಲಿಗೆ, ಅಥವಾ ಸೊಂಟಕ್ಕೆ ಕಟ್ಟಿಕೊಳ್ಳಬಹುದು. ಕಪ್ಪು ದಾರ ಮನುಷ್ಯನ ಮೇಲೆ ಬೀಳುವ ಕೆಟ್ಟ ದೃಷ್ಟಿಯನ್ನು ತಡೆಯುವ ಶಕ್ತಿಯುಳ್ಳದ್ದುಕಪ್ಪು ದಾರ ಇತರೆ ಯಾವುದೇ ನೆಗಟಿವ್ ಎನರ್ಜಿ ದೇಹವನ್ನು ಪ್ರವೇಶಿಸಲು ಬಿಡುವುದಿಲ್ಲ. ದೇಹಕ್ಕೆ ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ.ಇದೇ ಕಾರಣಕ್ಕಾಗಿ, ಹುಟ್ಟಿದ ಮಕ್ಕಳಿಗೆ ತಕ್ಷಣ ಕೈ ಕಾಲು ಮತ್ತು ಸೊಂಟಕ್ಕೆ ಕಪ್ಪು ದಾರವನ್ನು ಕಟ್ಟುತ್ತಾರೆ. ಮನೆಯ ಬಾಗಿಲಿಗೂ ಕಪ್ಪು ದಾರವನ್ನು ಕಟ್ಟಿದರೆ ಮನೆಯ ಒಳಗೆ ನಕಾರಾತ್ಮಕ ಶಕ್ತಿಯ ಪ್ರವೇಶವಾಗುವುದಿಲ್ಲ. ಕೆಲವರು ವಾಹನಗಳು ಅಪಘಾತ ವಾಗದಿರಲಿ ಎಂದು ಕಪ್ಪು ದಾರವನ್ನು ವಾಹನಗಳಿಗೂ ಕಟ್ಟುವುದು ವಾಡಿಕೆ ಇದೆ.
Comments