ಈ ದಾಖಲೆಗಳು ನಿಮ್ಮ ಬಳಿ ಇವೆಯಾ.. ಹಾಗಾದ್ರೆ ಸಿಕ್ತು ಅನ್ಕೊಳ್ಳಿ  5 ಲಕ್ಷ ರೂ…! ಹೇಗೆ ಅಂತೀರಾ..? ಇದನ್ನೊಮ್ಮೆ ಓದಿ…

23 Jul 2018 10:37 AM | General
21279 Report

ರಾಷ್ಟ್ರದ ಪ್ರಧಾನ ಮಂತ್ರಿಯವರ ಕನಸಿನ ಮತ್ತೊಂದು ಯೋಜನೆಯ ಬಗ್ಗೆ ನಾವೆಲ್ಲ ತಿಳಿದುಕೊಳ್ಳಲೆ ಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಐದು ಲಕ್ಷ ಹಣವನ್ನು ನೀಡಲಿದ್ದಾರೆ. ಈ ಯೋಜನೆಯು ಆಗಸ್ಟ್ 15 ಅಂದರೆ  ಸ್ವಾತಂತ್ರ್ಯೋತ್ಸವದಂದು ಜಾರಿಗೊಳ್ಳಲಿದೆ. ಭಾರತದಲ್ಲಿನ ಸುಮಾರು 11 ಕೋಟಿಗೂ ಅಧಿಕ ಕುಟುಂಬಗಳ 50 ಕೋಟಿಗೂ ಅಧಿಕ ಜನರ ಆರೋಗ್ಯವನ್ನು ಇನ್ನು ಮುಂದೆ ಮೊದೀಜಿಯ ಕೇಂದ್ರ ಸರ್ಕಾರವೇ ನೋಡಿಕೊಳ್ಳಲಿದೆ. ವಿಶ್ವದ ಅತಿ ದೊಡ್ಡ ಆರೋಗ್ಯ ಯೋಜನೆ ಇದಾಗಲಿದೆ.

ಪ್ರತಿಯೊಂದು ಕುಟುಂಬಕ್ಕೂ 5 ಲಕ್ಷ ಆರೋಗ್ಯ ವಿಮೆ ಒದಗಿಸುವ ಅಯುಷ್ಮಾನ್ ಭಾರತ್-ನ್ಯಾಷನಲ್ ಹೆಲ್ತ್ ಪ್ರೊಟೆಕ್ಷನ್ ಮಿಷನ್ ಈ ಯೋಜನೆಯ ಅಡಿಯಲ್ಲಿ 11 ಕೋಟಿ ಕುಟುಂಬಗಳಿಗೆ ಮೋದಿ ಸರ್ಕಾರವು ‘ಮೋದಿ ಕೇರ್ ಕಾರ್ಡ್’ ಗಳನ್ನು ವಿತರಣೆ ಮಾಡಲಿದೆ. ಐದು ಲಕ್ಷ ತನಕದವರೆಗೆ ಮೋದಿ ಸರ್ಕಾರವೇ ಆರೋಗ್ಯ ವೆಚ್ಚವನ್ನು ನೋಡಿಕೊಳ್ಳುತ್ತದೆ. ಆಯುಷ್ಮಾನ್ ಯೋಜನೆಯ ಕಾರ್ಡ್ಗಳು ಶೀಘ್ರವೇ ಫಲಾನುಭವಿಗಳನ್ನು ತಲುಪಲಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ 1 ಕೋಟಿ ಕುಟುಂಬ ಕಾರ್ಡ್ ಮುದ್ರಣವನ್ನು ಶುರು ಮಾಡಿದೆ. ಆಗಸ್ಟ್ ಹದಿನೈದರ  ಒಳಗೆ ಪ್ರಧಾನಿ ಮೋದಿಯವರ ಸಹಿ ಇರುವ ಕಾರ್ಡ್ ಗಳನ್ನು ಸಾಧ್ಯವಾದಷ್ಟು ಫಲಾನುಭವಿಗಳಿಗೆ ತಲುಪಿಸಲು ಮೋದಿ ಸರ್ಕಾರ ಪ್ರಯತ್ನವನ್ನು ಮಾಡುತ್ತಿದೆ. ಸರ್ಕಾರವು  ಜಿಲ್ಲೆ, ಗ್ರಾಮ ಮಟ್ಟದಲ್ಲಿ ಸಾರ್ವ ಜನಿಕ ಸಂಪರ್ಕ ಕಾರ್ಯ ಕ್ರಮವನ್ನು ಏರ್ಪಡಿಸಿ ಕಾರ್ಡುಗಳನ್ನು ವಿತರಣೆ ಮಾಡಲಿದೆ. ಅದಕ್ಕಾಗಿ “ಆಯುಷ್ಮಾನ್‌ ಪಖ್ವಾರಾ’ ಎಂಬ ಕಾರ್ಯಕ್ರಮವನ್ನು ಕೂಡ ನಡೆಸಲಿದೆ. ಆಯಾ ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮಗಳನ್ನು ಗುರುತಿಸಿ ಅಲ್ಲಿಗೆ ಕಾರ್ಡ್‌ಗಳ ರವಾನೆ ಮಾಡಿ ಆಶಾ ಕಾರ್ಯಕರ್ತೆಯರಿಂದ ಮನೆ ಮನೆಗೆ ಕಾರ್ಡ್‌ಗಳ ವಿತರಣೆಯನ್ನಯ ಮಾಡಲಾಗುತ್ತದೆ. 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಕಾಲ್‌ ಸೆಂಟರ್‌’ಗಳು ಅತೀ ಶೀಘ್ರವೇ  ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ..

Edited By

Manjula M

Reported By

Manjula M

Comments