ಡ್ರೈವಿಂಗ್ ಲೈಸನ್ಸ್ ಮಾಡಿಸುವವರಿಗೆ ಗುಡ್ ನ್ಯೂಸ್.. ಏಜೆಂಟ್ ಗಳ ಅಗತ್ಯವಿಲ್ಲದೇ ಸಿಗಲಿದೆ ಡ್ರೈವಿಂಗ್ ಲೈಸನ್ಸ್…!ಹೇಗೆ ಅಂತಿರಾ..?

ನಮ್ಮೆಲ್ಲರಿಗೂ ತಿಳಿದಿರುವ ಹಾಗೆ ಡ್ರೈವಿಂಗ್ ಲೈಸನ್ಸ್ ಮಾಡಲು ಸಿಕ್ಕಾಪಟ್ಟೆ ಓಡಾಡಬೇಕು. ಇದರ ಹಿನ್ನಲೆಯಲ್ಲಿಯೇ ಇದೊಂದು ಮಹತ್ವದ ಬೆಳವಣಿಗೆಗೆ ದೆಹಲಿ ಸರ್ಕಾರವು ಇದೀಗ ಮುಂದಾಗಿದೆ. ಆನ್ಲೈನ್ ಮೂಲಕ ಡ್ರೈವಿಂಗ್ ಲೈಸನ್ಸ್ ಮಾಡುವ ಅವಕಾಶ ಇದ್ದರೂ ಕೂಡ ಸಾಮಾನ್ಯ ವರ್ಗದ ಇದನ್ನ ಮಾಡಲು ತುಂಬಾ ಕಷ್ಟಕರವಾಗುತ್ತದೆ.
ಈ ಹೊಸ ಯೋಜನೆಯ ಮೂಲಕ ಡ್ರೈವಿಂಗ್ ಲೈಸನ್ಸ್ ಬಹಳಷ್ಟು ಸುಲಭವಾಗಿ ಮನೆಯಲ್ಲೇ ಕುಳಿತು ಪಡೆದುಕೊಳ್ಳಬಹುದು... ಹೊಸ ಸರ್ಕಾರದ ಈ ಯೋಜನೆಯಂತೆ ಇನ್ನು ಮುಂದೆ ದ್ವಿಚಕ್ರ ವಾಹನ ಮತ್ತು ಯಾವುದೇ ವಾಹನದ ಲೈಸನ್ಸ್ ಮಾಡಿಸುವವವರು RTO ಕಚೇರಿಗೆ ಓಡಾಡಬೇಕಿಲ್ಲ, ಅಥವಾ ಯಾವುದೇ ಏಜೆಂಟ್ ಗಳನ್ನು ಕೇಳುವ ಅವಶ್ಯಕತೆ ಇಲ್ಲ. ಕೇವಲ 50 ರೂಪಾಯಿಯಿಂದ ನಿಮ್ಮ ಕೆಲಸ ಆಗಲಿದೆ. ಹೊಸ ನಿಯಮದ ಪ್ರಕಾರ ಡ್ರೈವಿಂಗ್ ಲೈಸನ್ಸ್ ಮಾಡುವವರಿಗೆ ಸರ್ಕಾರದ ಪರವಾಗಿಯೇ ಹೆಲ್ಪ್ ಲೈನ್ ನಂಬರ್ ಅನ್ನು ನೀಡಲಾಗುತ್ತದೆ ಈ ನಂಬರ್ ಗೆ ಕರೆ ಮಾಡುವ ಮೂಲಕ ನೀವು ನಿಮ್ಮ ವಿಳಾಸವನ್ನು ನೊಂದಾಯಿಸಿಕೊಳ್ಳಬೇಕು. ನಂತರದ ಕೆಲದಿನಗಳಲ್ಲಿ ಸರ್ಕಾರಿ ಅಧಿಕಾರಿಯೊಬ್ಬರೇ ನಿಮ್ಮ ಬಳಿ ಬಂದು ಲೈಸನ್ಸ್ ಗೆ ಬೇಕಾದ ದಾಖಲೆಗಳನ್ನು ಮೊಬೈಲ್ ಮೂಲಕವೇ ಅಪ್ಲೋಡ್ ಮಾಡಿಕೊಳ್ಳುತ್ತಾರೆ ಮತ್ತು ಹತ್ತಿರದ RTO ಕಚೇರಿಯಲ್ಲಿ ನೀವು ಸೂಕ್ತ ದಿನದಂದು ಟ್ರಯಲ್ ನೀಡಬೇಕು.. ಆದರೆ ಸದ್ಯಕ್ಕೆ ಈ ಪ್ರಯತ್ನವನ್ನು ಇದೀಗ ದೆಹಲಿಯಲ್ಲಿ ನಡೆಸಲಾಗುತ್ತಿದೆ, ಈ ಯೋಜನೆಯಶಸ್ಸು ಕಾಣುತ್ತಿದ್ದಂತೆ ಎಲ್ಲ ಕಡೆ ಇದೆ ರೀತಿಯ ನಿಯಮ ಜಾರಿಗೆ ತರಲು RTO ಮುಂದಾಗಲಿದೆ.
Comments