ಅತೀ ಶೀಘ್ರದಲ್ಲೇ ಜಾರಿಗೆ ಬರಲಿದೆ 100 ರೂ. ಮುಖಬೆಲೆಯ ಹೊಸ ನೋಟು..!

ದೇಶದಲ್ಲಿ ಈಗಾಗಲೇ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಲಾಗಿದೆ. ಈ ನೋಟುಗಳನ್ನು ಬ್ಯಾನ್ ಮಾಡಿದ ಕರಾಳ ದಿನವನ್ನು ಕಪ್ಪು ಹಣ ಹೊಂದಿದ್ದವರು ಈಗಲು ನೆನಪಿಸಿಕೊಂಡರೆ ರಾತ್ರಿ ನಿದ್ದೆ ಮಾಡುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಅಷ್ಟರಮಟ್ಟಿಗೆ ಬಿಸಿ ಮುಟ್ಟಿಸಿದ್ದರು.
ನೋಟ್ ಬ್ಯಾನ್ ಆದ ಮೇಲೆ 500, 200, 50 ಮತ್ತು 10 ರೂ. ಮುಖಬೆಲೆ ಹೊಸ ಹೊಸ ನೋಟುಗಳು ನಿಧಾನವಾಗಿ ಚಾಲ್ತಿಗೆ ಬರಲು ಪ್ರಾರಂಭವಾಯಿತು. ಆದರೆ 100 ರೂ. ಮುಖಬೆಲೆಯ ನೋಟುಗಳು ಮಾತ್ರ ಹಾಗೆಯೇ ಇದೆ. ಈ ನೋಟಿನಲ್ಲಿ ಮಾತ್ರ ಯಾವುದೇ ಬದಲಾವಣೆ ಮಾಡದೇ, ಹಾಗೆಯೇ ಮುಂದುವರೆಸಿಕೊಂಡು ಹೋಗಲಾಗುತ್ತಿದೆ.ಹೊಸ 500, 200, 50 ಹಾಗೂ 10 ರೂ. ಮುಖಬೆಲೆಯ ನೋಟಿನ ಜೊತೆಗೆ 100 ರೂ. ಮುಖಬೆಲೆಯ ಹೊಸ ನೋಟು ಕೂಡ ಶೀಘ್ರದಲ್ಲಿಯೇ ಚಾಲನೆಗೆ ಬರಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡುವ ನಿರೀಕ್ಷೆಯನ್ನು ಹೊಂದಲಾಗಿದೆ.
ಈ ಸಂಬಂಧ ಈಗಾಗಲೇ ಮಧ್ಯಪ್ರದೇಶದ ದೇವಾಸ್ ನಲ್ಲಿ ಇರುವ ಬ್ಯಾಂಕ್ ನೋಟು ಮುದ್ರಣ ಕೇಂದ್ರದಲ್ಲಿ ಹೊಸ 100 ರೂ. ಮುಖಬೆಲೆಯ ನೋಟುಗಳ ಮುದ್ರಣ ಕಾರ್ಯ ಆರಂಭವಾಗಿದೆ. ಮುಂದಿನ ತಿಂಗಳು ಅಂದರೆ ಆಗಸ್ಟ್ ಅಥವಾ ಸೆಪ್ಟೆಂಬರ್ ನಲ್ಲಿ ಈ ಹೊಸ ನೋಟುಗಳು ಚಾಲನೆಗೆ ಬರುವ ಸಾಧ್ಯತೆ ಇದೆ. ಆದರೆ ಈಗಿರುವ 100 ರೂ. ಮುಖಬೆಲೆಯ ನೋಟಿನ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಆದರೆ ಈಗಿರುವ 100 ರೂ. ಮುಖಬೆಲೆಯ ನೋಟಿಗಿಂತಲೂ ಚಿಕ್ಕದು ಹಾಗೂ 10 ರೂ. ಮುಖಬೆಲೆಯ ನೋಟಿಗಿಂತ ದೊಡ್ಡದಾಗಿರಲಿದೆ. ಅಲ್ಲದೇ, ಈ ಹೊಸ ನೋಟು ಗುಜರಾತ್ ನ ಐತಿಹಾಸಿಕ ಮತ್ತು ರಾಣಿ ಕಿ ವಾವ್ ಬಾವಿಯ ಮೆಟ್ಟಿಲು ಹಾಘೂ ಮೈಖ್ರೋ ಸೆಕ್ಯೂರಿಟಿ ಲಕ್ಷಣಗಳನ್ನು ಒಳಗೊಂಡಿರಲಿದೆ ಎನ್ನಲಾಗುತ್ತಿದೆ. ಹೊಸ ನೋಟುಗಳು ಮಾರುಕಟ್ಟೆಗೆ ಚಾಲನೆಗೆ ಬಂದರೆ, ಎಟಿಎಂಗಳನ್ನು ಮತ್ತೆ ರೀ ಕ್ಯಾಲಿಬರ್ ಮಾಡುವ ಅಗತ್ಯವಿದೆ ಎಂದು ದೈನಿಕ ಭಾಸ್ಕರ ಪತ್ರಿಕೆ ವರದಿ ಮಾಡಿದೆ.
Comments