ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ವಾರದಲ್ಲೇ ಸಿಗಲಿದೆ ‘ಗುಡ್ ನ್ಯೂಸ್’..!
ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವ ವಿಷಯದಲ್ಲಿ ಈ ವಾರದಲ್ಲೇ ಸಿಹಿ ಸುದ್ದಿ ಸಿಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.ಬೆಂಗಳೂರಿನಲ್ಲಿ ಮಾಧ್ಯಮ ಸುದ್ದಿಗಾರರೊಂದಿಗೆ ಮಾತನಾಡಿರುವ ಸಾರಿಗೆ ಸಚಿವರಾದ ಡಿ.ಸಿ. ತಮ್ಮಣ್ಣ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದಿದ್ದಾರೆ.
ಪ್ರಸ್ತುತ ಸಾರಿಗೆ ಇಲಾಖೆ 600 ಕೋಟಿ ರೂ. ನಷ್ಟ ಅನುಭವಿಸುತ್ತಿದೆ. ಉಚಿತ ಬಸ್ ಪಾಸ್ ವಿತರಿಸಿದರೆ ಇದು 2000 ಕೋಟಿ ರೂ.ಗಳಿಗೆ ಏರಿಕೆಯಾಗುತ್ತದೆ. ಇದೀಗ ಶಿಕ್ಷಣ ಇಲಾಖೆಯು ಶೇ. 25 ರಷ್ಟು ವೆಚ್ಚ ಭರಿಸಲು ಅನುಮತಿಯನ್ನು ಸೂಚಿಸಿದ್ದು, ಈ ವಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯ ನಂತರ ಅಂತಿಮ ನಿರ್ಧಾರ ಹೊರಬೀಳಲಿದೆ ಎಂದು ಸಾರಿಗೆ ಸಚಿವರಾದ ಡಿ.ಸಿ ತಮ್ಮಣ್ಣ ತಿಳಿಸಿದ್ದಾರೆ.
Comments