ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್...! ಪಿಎಫ್ ಮಿತಿಯಲ್ಲಿ ಹೆಚ್ಚಳ..!?

ರಾಜ್ಯ ಸರ್ಕಾರ ತಮ್ಮ ನೌಕರರಿಗೆ ಸಿಹಿ ಸುದ್ದಿಯನ್ನು ನೀಡಲಿದೆ. ಸರ್ಕಾರಿ ನೌಕರರ ಭವಿಷ್ಯ ನಿಧಿ ಸಂಸ್ಥೆ ವತಿಯಿಂದ ಪಿಎಫ್ ಮಾಸಿಕ ವೇತನದ ಮಿತಿಯನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ಈಗಾಗಲೇ ಹಣಕಾಸು ಸಂಸ್ಥೆಗೆ ಕಳುಹಿಸಲಾಗಿದೆ. ವೇತನ ಮಿತಿಯನ್ನು ಹೆಚ್ಚಿಸುವ ಪ್ರಸ್ತಾಪವನ್ನು ಕೆಲವು ತಿದ್ದುಪಡಿಗಳನ್ನು ಮಾಡಿ ಸರ್ಕಾರಿ ನೌಕರರಿಗೆ ಶೀಘ್ರವೇ ಶುಭ ಸುದ್ದಿ ನೀಡಲಿದೆ ಎನ್ನಲಾಗುತ್ತಿದೆ.
ಹಣಕಾಸು ಇಲಾಖೆಗೆ ಕಳುಹಿಸಿರುವ ನೂತನ ಪ್ರಸ್ತಾಪದ ಪ್ರಕಾರ, 15,000 ದಿಂದ 21,000 ರೂ. ವರೆಗೆ ಕಡ್ಡಾಯ ಕೂಲಿ ಮಿತಿಯನ್ನು ಹೆಚ್ಚಿಸಬೇಕೆಂದು ತಿಳಿಸಿದೆ. ಹಣಕಾಸು ಸಚಿವಾಲಯವು ಈ ತಿದ್ದುಪಡಿಗಳನ್ನು ಈಗಾಗಲೇ ಒಪ್ಪಿಗೆ ಸೂಚಿಸಿದೆ. ನೂತನ ಪ್ರಸ್ತಾಪವನ್ನು ಶೀಘ್ರವೇ ಅಂಗೀಕರಿಸುವ ಸಾಧ್ಯತೆ ಇದೆ.ಸಂಘಟಿತ ವಲಯದ ನೌಕರರಿಗೆ ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಮಾಡಲು ಈ ಹಿಂದೆಯೇ ಚರ್ಚೆ ಮಾಡಲಾಗಿತ್ತು. ಆದರೆ ಹಣಕಾಸು ಇಲಾಖೆ ಕೆಲ ಕಾರಣಗಳಿಂದಾಗಿ ಈ ಪ್ರಸ್ತಾಪವನ್ನು ನಿರಾಕರಿಸಿತ್ತು. ಪಿಎಫ್, ಪಿಂಚಣಿ ಅನುಕೂಲ, ಕಡ್ಡಾಯ ವೇತನದ ಮಿತಿಯಲ್ಲಿ ಬರುವ ನೌಕರರು ಇಪಿಎಫ್ಓನಲ್ಲಿ ಕಡ್ಡಾಯವಾಗಿ ಒಳಪಡಲಿದ್ದಾರೆ. ಪಿಎಫ್ ಮತ್ತು ಪಿಂಚಣಿ ಎರಡೂ ಅನುಕೂಲಗಳನ್ನು ಪಡೆಯಲಿದ್ದಾರೆ. ಈಗಾಗಲೇ ನಿರ್ಧರಿಸಿದ ಮಿತಿಗಿಂತ ಹೆಚ್ಚು ಹಣವನ್ನು ಗಳಿಸುವವರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಅನುಕೂಲ ಪಡೆದುಕೊಳ್ಳುವುದು ಅಥವಾ ಬಿಡುವುದು ಆ ನೌಕರರ ವಿವೇಚನೆಗೆ ಬಿಟ್ಟ ವಿಚಾರವಾಗಿದೆ.
Comments