ಪ್ರತಿ ತಿಂಗಳು LPG ಗ್ಯಾಸ್ ತುಂಬಿಸುವವರಿಗೆ ಗುಡ್ ನ್ಯೂಸ್...ಏನ್ ಗೊತ್ತಾ?
ಎಲ್ ಪಿ ಜಿ ಗ್ಯಾಸ್ ಬಳಸುತ್ತಿರುವ ಪ್ರತಿಯೊಂದು ಬಡ ಕುಟುಂಬಗಳಿಗೂ ಕೇಂದ್ರಸರ್ಕಾರವು ಸಿಹಿಸುದ್ದಿಯಿಂದನ್ನು ತಿಳಿಸಿದೆ ಅದೇನೆಂದರೆ ಪ್ರತಿ ತಿಂಗಳು ಕೂಡ ನಾವು LPG ತುಂಬಿಸಿಕೊಂಡು ಬಂದ ನಂತರ ಸ್ವಲ್ಪ ಮಟ್ಟಿನ ಹಣ ಸಬ್ಸಿಡಿ ರೂಪದಲ್ಲಿ ನಮ್ಮ ಬ್ಯಾಂಕ್ ಖಾತೆಗೆ ಬರುತ್ತಿತ್ತು.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆಯಾಗಿರುವ ಹಿನ್ನಲೆಯಲ್ಲಿ ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್‌ನ ದರಗಳನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರವು ಎಲ್ಪಿಜಿ ಸಬ್ಸಿಡಿ ದರವನ್ನು ಶೇ. 60 ಹೆಚ್ಚಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಹೆಚ್ಚಳವಾಗದ ಹಿನ್ನಲೆ ಗ್ರಾಹಕರ ಸಬ್ಸಿಡಿಯನ್ನು ಸರ್ಕಾರ ಹೆಚ್ಚಳ ಮಾಡಿದೆ. ಇದರಿಂದ ಗ್ರಾಹಕರು ನಿರಾಳರಾಗಿದ್ದಾರೆ ಎಂದು ಐಒಸಿ ಅಧ್ಯಕ್ಷ ಸಂಜೀವ್ ಸಿಂಗ್ ತಿಳಿಸಿದ್ದಾರೆ. ಹಾಗೇ ಕಳೆದ ಮೇಯಲ್ಲಿ 159.29 ರೂ. ಇದ್ದ ಸಬ್ಸಿಡಿ ಜೂನ್ ತಿಂಗಳಲ್ಲಿ 204.95 ರೂ.ಗೆ ತಲುಪಿದ್ದು, ಈ ತಿಂಗಳ ಆರಂಭದಲ್ಲಿ 257.74 ರೂ.ಗೆ ತಲುಪಿದೆ. ಒಟ್ಟಾರೆಯಾಗಿ ಒಂದೂವರೆ ತಿಂಗಳ ಅವಧಿಯಲ್ಲಿ ಎಲ್ಪಿಜಿ ಸಬ್ಸಿಡಿ ದರದಲ್ಲಿ ಶೇ. 60 ಏರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.
Comments