ಇಂದು ಪ್ರಕಟವಾಗಲಿದೆ ಎಸ್‌ಎಸ್‌ಎಲ್ ಸಿ ಪೂರಕ ಫಲಿತಾಂಶ

19 Jul 2018 10:36 AM | General
364 Report

ಜೂನ್ ನಲ್ಲಿ ನಡೆಸಿದ ಎಸ್‌ಎಸ್ ಎಲ್ ಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ಜು. 19 ರಂದು ಅಂದರೆ ಇಂದು ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಪ್ರಕಟಿಸಲಿದ್ದು, ಮಧ್ಯಾಹ್ನ 12 ಗಂಟೆಯ ನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ಫಲಿತಾಂಶ ಬರಲಿದೆ.

ಪ್ರೌಢ ಶಾಲೆಗಳಲ್ಲಿ ನಾಳೆ ಅಂದರೆ  ಜು. 20 ರಂದು ಮಧ್ಯಾಹ್ನ ಸುಮಾರು 12 ಗಂಟೆ ನಂತರ ಫಲಿತಾಂಶ ಪ್ರಕಟಿಸಲಾಗುವುದು ಎಂದು ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ. ಜೂ. 21 ರಿಂದ 28 ರ ವರೆಗೆ ರಾಜ್ಯದ 673 ಪರೀಕ್ಷಾ ಕೇಂದ್ರಗಳಲ್ಲಿ ಎಸ್ ಎಸ್‌ಎಲ್ ಸಿ ಪೂರಕ ಪರೀಕ್ಷೆಯು ನಡೆದಿತ್ತು. ಜುಲೈ 8 ರಿಂದ ರಾಜ್ಯದ 9 ಶೈಕ್ಷಣಿಕ ಜಿಲ್ಲೆಗಳ 50 ಮೌಲ್ಯಮಾಪನ ಕೇಂದ್ರಗಳಲ್ಲಿ ಒಟ್ಟು 10,946 ಮೌಲ್ಯಮಾಪಕರು ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ನಡೆಸಿದ್ದರು. ಆಲ್ ದಿ ಬೆಸ್ಟ್ ಸ್ಟೂಡೆಂಟ್ಸ್…

Edited By

Manjula M

Reported By

Manjula M

Comments