ಇಲ್ಲಿ ಮನುಷ್ಯ ತಯಾರಿಸಿದ ಚಪ್ಪಲಿಗೆ ಸಿಕ್ಕಾಪಟ್ಟೆ ಬೇಡಿಕೆಯಂತೆ..! ಕಾರಣ ಏನ್ ಗೊತ್ತಾ?

ಈ ಗ್ರಾಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಬ್ಯಾಂಕ್ ಗಳಿಂದ ಸಾಲ ಪಡೆದುಕೊಂಡಿದ್ದಾರೆ. ಈ ಗ್ರಾಮದಲ್ಲಿ ಪುರುಷ, ಸ್ತ್ರೀ ಎಂಬ ಯಾವುದೇ ಭೇದಭಾವವಿಲ್ಲದೇ ಯಂತ್ರಗಳನ್ನು ಬಳಕೆ ಮಾಡದೇ ಕೇವಲ ಕೈಯಲ್ಲಿ ಪಾದರಕ್ಷೆಗಳನ್ನು ತಯಾರು ಮಾಡುತ್ತಿದ್ದಾರೆ.
ಇಲ್ಲಿ ಯಂತ್ರಗಳ ಬಳಕೆಗೆ ಬೆಲೆ ಕೊಡುವುದಿಲ್ಲ ಬದಲಾಗಿ ಮನುಷ್ಯನ ಕೈಗಳಿಗೆ ಹೆಚ್ಚು ಕೆಲಸ ನೀಡಲಾಗುತ್ತದೆ. ಕೈಯಂದಿಲೇ ವಿಶಿಷ್ಟ ಚಪ್ಪಲಿಗಳನ್ನು ತಯಾರಿಸಿ ಕಾಯಕಕ್ಕೆ ಹೊಸ ರೂಪ ನೀಡಿದ್ದಾರೆ. ಕುರುಬರು ಸಾಮಾನ್ಯವಾಗಿ ಹೆಚ್ಚು ಕಾಲ ಕಾಡು ಮೇಡುಗಳಲ್ಲಿ ಕಳೆಯುತ್ತಾರೆ. ಹಾಗಾಗಿ ದೇಹ ತಂಪಾಗಿರಲು ಚರ್ಮದ ಚಪ್ಪಳಿಗಳನ್ನು ಮಾತ್ರವೇ ಧರಿಸುತ್ತಾರೆ. ಕಾಡು ಮೇಡುಗಳನ್ನು ಸುತ್ತುವುದರಿಂದ ಕಾಲು ಒಡೆಯುವುದಿಲ್ಲ. ಈ ಜನಾಂಗದವರು ತಮಗೆ ಬೇಕಾದ ರೀತಿಯಲ್ಲಿ ಚಪ್ಪಲಿಗಳನ್ನು ತಯಾರಿಸುತ್ತಾರೆ. ಇದರಿಂದ ಆರೋಗ್ಯಕ್ಕೂ ಒಳ್ಳೆಯದು.
Comments