ಪತ್ನಿ ವಿರುದ್ದ ವಧುದಕ್ಷಿಣೆ ಕಿರುಕುಳದ ದೂರು ನೀಡಿದ ಪತಿರಾಯ! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ?

ವಜ್ರದ ಡಾಬಿಗಾಗಿ ಗಂಡನಿಗೆ ಬೇಡಿಕೆ ಇಟ್ಟ ಹೆಂಡತಿಯ ವರ್ತನೆಗೆ ಬೇಸತ್ತ ಪತಿ ತನ್ನ ಪತ್ನಿಯ ವಿರುದ್ಧ ವಧುದಕ್ಷಿಣೆ ಕಿರುಕುಳದ ದೂರು ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಹೆಂಡತಿಯ ಕಿರುಕುಳದಿಂದ ನೊಂದು ವಧುದಕ್ಷಿಣೆ ಕಿರುಕುಳದ ದೂರು ನೀಡಿರುವವನ ಹೆಸರು ಧೀರಜ್ ರೆಡ್ಡಿ ಚಿಂತಾಲ. ಆಂದ್ರ ಮೂಲದ ಧೀರಜ್ ರೆಡ್ಡಿ ಚಿಂತಾಲ ಎಂಬುವವರು 2016ರಲ್ಲಿ ಜಯಶ್ರುತಿ ಎನ್ನುವರನ್ನು ಮದುವೆ ಮಾಡಿಕೊಂಡಿದ್ದರು. ವೃತ್ತಿಯಲ್ಲಿ ಇಬ್ಬರೂ ಕೂಡ ಸಾಫ್ಟ್ವೇರ್ ಇಂಜಿನಿಯರ್ ಗಳಾಗಿದ್ದರು.
ಇದೇ ಸಮಯದಲ್ಲಿ ಜಯಶ್ರುತಿ ಐಷಾರಾಮಿ ಜೀವನ ನಡೆಸಲು ಗಂಡನಿಗೆ ಹಣ ಹಾಗೂ ಆಭರಣಗಳಿಗಾಗಿ ಪೀಡಿಸುತ್ತಿದ್ದ ಪತ್ನಿ, 40 ಲಕ್ಷ ಮೌಲ್ಯದ ಆಭರಣಕ್ಕೆ ಬೇಡಿಕೆಯನ್ನು ಇಟ್ಟಿದ್ದಳು. 30 ಲಕ್ಷ ರೂ. ಡೈಮಂಡ್ ಡಾಬು ಕೊಡಿಸದಿದ್ದರೆ ಸೂಸೈಡ್ ಮಾಡಿಕೊಳ್ಳುವುದಾಗಿ ಪತ್ನಿ ಪೀಡಿಸಿದ್ದಳು. ಪತ್ನಿಯ ವರ್ತನೆಯ ಬಗ್ಗೆ ಆಕೆಯ ಪೋಷಕರ ಬಳಿ ಹೇಳಿಕೊಂಡರು ಕೂಡ ಅವರ ಮಗಳ ಪರವಾಗಿಯೇ ಮಾತನಾಡಿ ಆಸ್ತಿಯನ್ನು ನನ್ನ ಮಗಳಿಗೆ ಬರೆದುಕೊಡು ಅಂತ ಗಲಾಟೆಯನ್ನು ಮಾಡಿದ್ದರು ಎನ್ನುವ ಆರೋಪವು ಕೂಡ ಕೇಳಿ ಬಂದಿದೆ.ಜಯಶ್ರುತಿಯ ಕಿರುಕುಳದಿಂದ ಬೇಸತ್ತ ಪತಿ ತನ್ನ ಪತ್ನಿ ಹಾಗೂ ಪೋಷಕರ ವಿರುದ್ಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.
Comments