ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಸಿಗಲಿದೆ 3 ಲಕ್ಷ ಬಂಪರ್ ಆಫರ್..!ಹೇಗೆ ಅಂತಿರಾ..!?

ಈಗಾಗಲೇ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವು ಅನೇಕ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳಿಂದ ಸಾಕಷ್ಟು ಜನರಿಗೆ ಅನುಕೂಲವಾಗಿದೆ. ನಮ್ಮ ರಾಜ್ಯ ಸರ್ಕಾರವು ಈಗಾಗಲೇ ರಾಜ್ಯದ ಅಭಿವೃದ್ಧಿಯಾಗಲಿ ಎಂಬ ಉದ್ದೇಶದಿಂದ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ.
ಅಂತಹ ಪ್ರಮುಖ ಯೋಜನೆಗಳಲ್ಲಿ ಈ ‘ಉದ್ಯೋಗಿನಿ’ ಯೋಜನೆಯು ಕೂಡ ಒಂದು. ಈ ಯೋಜನೆಯಲ್ಲಿ ರಾಜ್ಯ ಸರ್ಕಾರವು ಮಹಿಳೆಯರಿಗೆ ಬಂಪರ್ ಕೊಡುಗೆಯನ್ನು ನೀಡಿದೆ.ಮಹಿಳಾ ಸಬಲೀಕರಣಕ್ಕಾಗಿಯೇ ‘ಉದ್ಯೋಗಿನಿ’ ಯೋಜನೆಯಡಿಯಲ್ಲಿ ಮಹತ್ತರವಾದಂತಹ ಬದಲಾವಣೆ ತಂದಿರುವ ರಾಜ್ಯ ಸರ್ಕಾರವು 3 ಲಕ್ಷ ರೂ. ಸಾಲ ಸೌಲಭ್ಯವಾಗಿ ನೀಡಲಿದೆ..ಈ ಸೌಲಭ್ಯದಲ್ಲಿ 90,000 ರೂ.ವರೆಗೂ ಸಬ್ಸಿಡಿಯನ್ನು ನೀಡಲಾಗುವುದು. ವಾರ್ಷಿಕವಾಗಿ 1.5 ಲಕ್ಷ ರೂ. ಆದಾಯ ಹೊಂದಿರುವಂತಹ 55 ವರ್ಷದೊಳಗಿನ ಎಲ್ಲಾ ಮಹಿಳೆಯರಿಗೂ ಸಾಲ ನೀಡಲಾಗುವುದು.. ಕಾಫಿ –ಟೀ, ಅಗರಬತ್ತಿ, ಮಾರಾಟ, ಬೇಕರಿ, ಮೀನು ಮಾರಾಟ, ದಿನಸಿ ಅಂಗಡಿ, ಉಪ್ಪಿನಕಾಯಿ ಮಾಡುವುದು ಈ ರೀತಿಯ ಉದ್ಯಮಗಳನ್ನು ಆರಂಭಿಸಬಹುದು.
Comments