ಸಿಹಿಸುದ್ದಿ : ಸಕ್ಕರೆ ನಾಡಿಗೆ ಬೆಳಕು ಕೊಟ್ಟ ಬಾಲಿವುಡ್ ನಟಿ ಆಲಿಯಾ ಭಟ್..!!

ಬಾಲಿವುಡ್ ನಟಿ ಆಲಿಯಾಭಟ್ ಅವರು 'ಮೈ ವಾರ್ಡ್ ರೊಬ್ ಇಸ್ ಯುವರ್ ವಾರ್ಡ್ ರೋಬ್' ಅಭಿಯಾನದಿಂದ ಮಂಡ್ಯ ಜಿಲ್ಲೆಯ ಕಿಕ್ಕೇರಿ ಗ್ರಾಮದ 32 ಗುಡಿಸಲುಗಳಿಗೆ ಬೆಳಕು ಲಭ್ಯವಾಗಿದೆ. ಈ ಬಗ್ಗೆ ಆಲಿಯಾ ಭಟ್ ಟ್ವೀಟ್ ಮಾಡಿದ್ದಾರೆ.
ಕೆಲ ತಿಂಗಳ ಹಿಂದೆ ಮೈವಾರ್ಡ್ ರೋಬ್ ಇಸ್ ಯುವರ್ ವಾರ್ಡ್ ರೋಬ್ ಅಭಿಯಾನದಲ್ಲಿ ಆಲಿಯಾ ತಾವು ಬಳಕೆಮಾಡಿದ ಉಡುಪುಗಳನ್ನು ಹರಾಜಿಗೆ ಇಟ್ಟಿದ್ದರು. ಅದರಿಂದ ಬಂದ ಹಣವನ್ನು ಬೆಂಗಳೂರು ಮೂಲದ ಅರೋಹಾ ಎನ್ ಜಿ ಒ ಆರಂಭಿಸಿರುವ ಲಿಟ್ಟರ್ ಆಫ್ ಲೈಟ್ ಕಾರ್ಯಕ್ರಮಕ್ಕೆ ನೀಡಿದ್ದಾರೆ. ಆರೋಹಾ ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಮಾಡಿಕೊಂಡು ವಿದ್ಯುತ್ ಇಲ್ಲದ ಕುಗ್ರಾಮಗಳಿಗೆ ಸೌರಶಕ್ತಿ ದೀಪ ನೀಡುವ ಕೆಲಸ ಮಾಡುತ್ತಿದೆ. ಈಗ ಆಲಿಯಾ ಭಟ್ ನೀಡಿದ ಹಣದಿಂದ ಕಿಕ್ಕೇರಿ ಗ್ರಾಮದ 32 ಗುಡಿಸಲುಗಳಿಗೆ ಸೋಲಾರ್ ಲ್ಯಾಂಪ್ ನೀಡಲಾಗಿದೆ. ಈ ಮೂಲಕ ಕತ್ತಲಲ್ಲಿ ಜೀವನ ದೂಡುತ್ತಿದ್ದ 200 ಕೂಲಿ ಕಾರ್ಮಿಕರಿಗೆ ಆಲಿಯಾ ಬೆಳಕು ನೀಡಿದ್ದಾರೆ. ಈ ಅಭಿಯಾನ ಮೊದಲ ಹಂತದಲ್ಲಿ ಯಶಸ್ಸು ಕಂಡಿರುವುದಕ್ಕೆ ಆಲಿಯಾ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.
Comments