ಆಗಸ್ಟ್ ತಿಂಗಳಿನಲ್ಲಿ ತಿರುಪತಿಗೆ ಹೋಗುವ ಪ್ಲಾನ್ ಮಾಡಿದ್ರೆ ಕ್ಯಾನ್ಸಲ್ ಮಾಡಿ..!ಕಾರಣ ಏನ್ ಗೊತ್ತಾ..?

ಹಿಂದೂಗಳ ಪವಿತ್ರ ಹಾಗೂ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಶ್ರೀಕ್ಷೇತ್ರ ತಿರುಪತಿಯಲ್ಲಿ ಆಗಸ್ಟ್ ತಿಂಗಳಿನಿಂದ ಒಂಭತ್ತು ದಿನಗಳ ಕಾಲ ದೇವರ ದರ್ಶನಕ್ಕೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ..
ಅಷ್ಟಬಂಧಬಾಲಾಲಯ ಮಹಾ ಸಂಪೋಕ್ಷಣಂ ಅಂಗವಾಗಿ 9 ದಿನಗಳ ಕಾಲ ವಿಶೇಷ ಪೂಜೆ ನಡೆಯುವುದರ ಕಾರಣ ಈ ವೇಳೆ ಸಾರ್ವಜನಿಕರಿಗೆ ಅವಕಾಶವಿಲ್ಲ…. ಟಿಡಿಟಿ ಸಭೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ನಡೆಯಲಿರುವ ಐತಿಹಾಸಿಕ ಆಚರಣೆ ಸಂದರ್ಭದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವನ್ನು ಹಾಕಲು ತೀರ್ಮಾನಿಸಲಾಗಿದೆ. ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ಅಷ್ಟಬಂಧಬಾಲಾಲಯ ಮಹಾ ಸಂಪೋಕ್ಷಣಂ ನಡೆಯುತ್ತದೆ. ದೇಶದ ಬೇರೆ ಬೇರೆ ಭಾಗಗಳಿಂದ ತಿರುಪತಿಗೆ ಭಕ್ತಾದಿಗಳು ಬರದಿರುವುದು ಒಳಿತು ಎಂದು ಮನವಿಯನ್ನು ಮಾಡಿದ್ದಾರೆ.
Comments