ನಿಮ್ಮ ಬಳಿ ರೇಷನ್ ಕಾರ್ಡ್ ಇಲ್ವಾ..? ಹೊಸದಾಗಿ ರೇಷನ್ ಕಾರ್ಡ್ ಮಾಡಿಸುವವರಿಗೆ ಇಲ್ಲಿದೆ ಗುಡ್ ನ್ಯೂಸ್..!

ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಹೊಸ ರೇಷನ್ ಕಾರ್ಡ ಮಾಡಿಸುವುದನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ರೇಷನ್ ಕಾರ್ಡ್ ಮಾಡಿಸುವವರಿಗೆ ಅವಕಾಶ ಬಂದಿದೆ. ಹೊಸ ಕಾರ್ಡ್ ಮಾಡಲು ವೆಬ್ ಸೈಟ್ ನಲ್ಲಿ ಅವಕಾಶ ನೀಡಲಾಗಿದೆ.
ಒಂದು ವೇಳೆ ನೀವು ಕಳೆದ ವರ್ಷ ರೇಷನ್ ಕಾರ್ಡ್ ಗೆ ಸಲ್ಲಿಸಿದಂತಹ ಅಪ್ಲಿಕೇಶನ್ ನಿಮ್ಮ ಬಳಿ ಇದ್ದರೆ ಅಥವಾ ಇನ್ನು ರೇಷನ್ ಕಾರ್ಡ್ ಸಿಕ್ಕಿಲ್ಲವಾದರೆ, ರೇಷನ್ ಕಾರ್ಡ್ ಗೆ ಅಪ್ಲಿಕೇಶನ್ ಹಾಕುವಾಗ ಕೊಟ್ಟಂತಹ ರಶೀದಿಯಲ್ಲಿರುವ ACK NUMBER ನಿಂದಾಗಿ ನಿಮ್ಮ ಮನೆಯಲ್ಲಿ ಬಿಟ್ಟು ಹೋಗಿರುವಂತಹ ಸದಸ್ಯರ ಹೆಸರನ್ನು ಸೇರಿಸಬಹುದಾಗಿದೆ. ಅಷ್ಟೆ ಅಲ್ಲದೆ ಈಗಿರುವ ವೆಬ್ ಸೈಟ್ ನಿಮಗೆ ಹೊಸ ರೇಷನ್ ಕಾರ್ಡ್ ಮಾಡಿಕೊಡಲು ಎಲ್ಲಾ ರೀತಿಯ ಅವಕಾಶವಿದೆ. ಇದೀಗ ರೇಷನ್ ಕಾರ್ಡ್ ಮಾಡಿಕೊಡಲು ಆಧಾರ್ ಕಾರ್ಡ್ ಇದ್ದರೆ ಸಾಕು. ನಿಮ್ಮ ಆಧಾರ್ ಕಾರ್ಡ್ ಯಾವ ವಿಳಾಸದಲ್ಲಿ ಇರುತ್ತದೆ ಅಲ್ಲಿಯೇ ನಿಮಗೆ ರೇಷನ್ ದೊರೆಯುತ್ತದೆ ಮತ್ತು ಬದಲಾವಣೆ ಕೂಡ ಮಾಡಿಕೊಳ್ಳುವಂತಹ ಅವಕಾಶವಿದೆ.
Comments